ಅರಕಲಗೂಡು ತಾಲೂಕಿನ ಕೇರಳಾಪುರದಲ್ಲಿ ಮಳೆಗೆ ವಾಸದ ಮನೆ ಹಾನಿಗೀಡಾದ ಸ್ಥಳಕ್ಕೆ ಗುರುವಾರ ರಾಜಸ್ವ ನಿರೀಕ್ಷ ಭಾಸ್ಕರ್, ಗ್ರಾಮ ಲೆಕ್ಕಾಧಿಕಾರಿ ಉಮೇಶ್ ಭೇಟಿ ನೀಡಿ ಪರಿಶೀಲಿಸಿದರು.  
ಜಿಲ್ಲೆ

ಮಳೆಗೆ ಮನೆ ಗೋಡೆ ಕುಸಿದು ಹಾನಿ

ಶಿವಶಂಕರ್ ಎಂ. ಹೆಬ್ಬಳ್ಳ

ಅರಕಲಗೂಡು: ತಾಲೂಕಿನಲ್ಲಿ ಸುರಿದ ಮಳೆಗೆ ವಿವಿಧೆಡೆ ವಾಸದ ಮನೆಗಳ ಗೋಡೆ ಕುಸಿದು ಹಾನಿಗೀಡಾಗಿವೆ.

ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ತಾಲೂಕಿನ ಹಲವೆಡೆ ಬುಧವಾರ ಮಧ್ಯಾಹ್ನದ ನಂತರ ಜೋರಾಗಿ ಸುರಿಯಿತು. ಮಳೆಯಿಂದಾಗಿ ಕೇರಳಾಪುರದ ಶಾರದಮ್ಮ, ಬಿಟ್ಟಗೌಡನಹಳ್ಳಿ ಪದ್ಮಮ್ಮ, ವಿಜಾಪುರ ಕಾಲನಿ ಗಾಯತ್ರಿ ಅವರ ವಾಸದ ಮನೆ ಗೋಡೆ ಕುಸಿದು ಹಾನಿಯಾಗಿದೆ. ಗುರುವಾರ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಮಲ್ಲಿಪಟ್ಟಣದಲ್ಲಿ 34.0 ಮಿಲಿ ಮೀಟರ್, ಕಸಬಾ 16.2 ಮಿ.ಮೀ., ದೊಡ್ಡಮಗ್ಗೆ 38.8 ಮಿ.ಮೀ., ರಾಮನಾಥಪುರ 20.3 ಮಿ.ಮೀ., ಕೊಣನೂರು 23.7 ಮಿ.ಮೀ., ದೊಡ್ಡಬೆಮ್ಮತ್ತಿ 20.2 ಮಿ.ಮೀ., ಮತ್ತು ಬಸವಾಪಟ್ಟಣದಲ್ಲಿ 23.2 ಮಿ.ಮೀ., ಮಳೆಯಾಗಿದೆ.