ಜಿಲ್ಲೆ

ಜೋರು ಮಳೆಗೆ ಕುಸಿದ ಮನೆ ಗೋಡೆ

ರಾಜಣ್ಣ

ಕಿಕ್ಕೇರಿ: ಹೋಬಳಿಯ ಚೌಡೇನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಜೋರು ಮಳೆಗೆ ಮನೆಯ ಗೋಡೆ ಸಂಪೂರ್ಣ ಕುಸಿದಿದೆ.


ವಾರದಿಂದ ಬಿಡುವ ನೀಡಿದ್ದ ಮಳೆ ಶನಿವಾರ ರಾತ್ರಿ ಜೋರಾಗಿ ಸುರಿದಿದೆ. ಮಳೆಯ ಆರ್ಭಟಕ್ಕೆ ಗ್ರಾಮದ ರೈತ ಸಿ.ಜೆ.ವೆಂಕಟೇಶ ಅವರಿಗೆ ಮನೆಯ ಮಣ್ಣಿನ ಹಳೆಯ ಗೋಡೆ ಮೇಲ್ಭಾಗದಿಂದ ಕುಸಿದಿದೆ. ದಪ್ಪದಾದ ಮಣ್ಣಿನ ಗೋಡೆ ಕುಸಿಯುವ ಜತೆಗೆ ನಾಡಹೆಂಚು, ಛಾವಣಿ ಸಂಪೂರ್ಣ ನಾಶವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಮನೆಯಲ್ಲಿದ್ದ ಧವಸ ಧಾನ್ಯ, ಪಾತ್ರೆ, ಬಟ್ಟೆಗಳು ಹಾಳಾಗಿವೆ.


ಪ್ರಾಕೃತಿಕ ವಿಕೋಪದಡಿಯಲ್ಲಿ ತುರ್ತು ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.