ತೊಂಡವಾಡಿ ಗ್ರಾಮದಲ್ಲಿ ಮನೆ ಗೋಡೆ ಕುಸಿದಿರುವುದು. 
ಜಿಲ್ಲೆ

ತೊಂಡವಾಡಿ ಗ್ರಾಮದಲ್ಲಿ ಮನೆ ಗೋಡೆ ಕುಸಿತ

ಅಭಿನಯ್ ಎಚ್.ಎಂ

ಗುಂಡ್ಲುಪೇಟೆ: ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ತಾಲೂಕಿನ ತೊಂಡವಾಡಿ ಗ್ರಾಮದ ಸಿದ್ದರಾಜು ಅವರ ಮನೆ ಗೋಡೆ ಶುಕ್ರವಾರ ನಸುಕಿನಲ್ಲಿ ಕುಸಿದಿದೆ.

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.