ಜಿಲ್ಲೆ

ಮನೆ ಗೋಡೆ ಕುಸಿತ

ಪ್ರಸಿನ್ ಕೆ.ಆರ್

ಅರಸೀಕೆರೆ: ನಗರದ ಮಟನ್ ಮಾರ್ಕೆಟ್ ಚಾಂದಿನಿ ಚೌಕ ಚಪ್ಪಡಿ ಕಲ್ಲು ಬೀದಿ ಬಡಾವಣೆಯಲ್ಲಿ ಮಳೆ ಆರ್ಭಟಕ್ಕೆ ಭಾನುವಾರ ಬೆಳಗ್ಗೆ ಸೊಗರಾ ಬೇಗಂ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.

ಮನೆಯಲ್ಲಿದ್ದ ಸೊಗರಾ ಬೇಗಂ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.