ಜಿಲ್ಲೆ

ಮನೆಯ ಇಟ್ಟಿಗೆ ಒಡೆದು ನಗನಾಣ್ಯ ಕಳವು

ಬಾಬುರಾವ ಯಡ್ರಾಮಿ


ಕಲಬುರಗಿ ನಗರದ ರಿಂಗ್‌ರೋಡ್‌ನಲ್ಲಿರುವ ಲಂಗರ ಹನುಮಾನ ನಗರದ ಮರಗಮ್ಮ ಗುಡಿ ಹತ್ತಿರದಲ್ಲಿರುವ ಸಂತೋಷ ಗುತ್ತೇದಾರ ಎಂಬುವರ ಮನೆಯ ಇಟ್ಟಿಗೆ ಗೋಡೆ  ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ಕಳವು ಮಾಡಲಾಗಿದೆ. ಗೋಡೆ ಒಡೆದು ನುಗ್ಗಿದ ಕಳ್ಳರು ೫ ಗ್ರಾಂ ಚಿನ್ನದ ಸರ, ೩ ಗ್ರಾಂ ರಿಂಗ್ ಮತ್ತು ೨೦ ಸಾ.ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--