ಜಿಲ್ಲೆ

ಶಾಸಕರ ಆಪ್ತ ಸಹಾಯಕನ ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ

Haveri - Kariyappa Aralikatti

ರಾಣೆಬೆನ್ನೂರ: ಸ್ಥಳಿಯ ಶಾಸಕರ ಆಪ್ತ ಸಹಾಯಕ ಶ್ರೀನಿವಾಸ ಹಳ್ಳಳ್ಳಿ ಅವರ ಮನೆಯ ಬೀಗ ಮುರಿದು ಒಳಗೆ ನುಗ್ಗಿದ ಖದೀಮರು ಬರೋಬ್ಬರಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿರುವ ಘಟನೆ ಇಲ್ಲಿಯ ಕಂಠಿಬೀರೇಶ್ವರ ನಗರದಲ್ಲಿ ನಡೆದಿದೆ.

ಶ್ರೀನಿವಾಸ ಹಳ್ಳಳ್ಳಿ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿತ್ತಿದ್ದ ಸಮಯದಲ್ಲಿ ಖದೀಮರು ಮನೆಯ ಬಾಗಿಲ ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ನಂತರ ತೇಜೂರಿ, ಲಾಕರ್​ನಲ್ಲಿದ್ದ 4.50 ಲಕ್ಷ ರೂ. ನಗದು ಸೇರಿ 21.30 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಘಟನೆ ಸ್ಥಳಕ್ಕೆ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.