ಜಿಲ್ಲೆ

ಮನೆ ಬೀಗ ಮುರಿದು 1.46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

Haveri - Kariyappa Aralikatti

ರಾಣೆಬೆನ್ನೂರ: ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಬಾಗಿಲಿನ ಲಾಕರ್ ಮುರಿದು 1.46 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ ಘಟನೆ ಇಲ್ಲಿಯ ಕಂಠಿಬೀರೇಶ್ವರ ನಗರದಲ್ಲಿ ಬುಧವಾರ ನಡೆದಿದೆ.
ಬಸವರಾಜ ಮಲ್ಲಾಡದ ಎಂಬುವರ ಮನೆ ಕಳ್ಳತನ ಆಗಿರುವುದು.
ಇವರು ಮನೆ ಬಾಗಿಲನ್ನು ಇಂಟರ್ ಲಾಕ್ ಮಾಡಿಕೊಂಡು ಹೋದ ಸಮಯದಲ್ಲಿ ಯಾರೋ ಕಳ್ಳರು ಆಯುದ್ಧದಿಂದ ಇಂಟರ್ ಲಾಕ್ ಮುರಿದು ಒಳಗೆ ನುಗ್ಗಿ 1.46 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.