ಮಂಜೇಶ್ವರ: ವಿದ್ಯಾರ್ಥಿಗಳು ಜ್ಞಾನಾರ್ಜನೆಗೈದು ಉತ್ತಮ ನಾಗರಿಕರಾಗುವುದರ ಜತೆಗೆ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳು ರಾಷ್ಟ್ರಿಯ ಸೇವಾ ಯೋಜನೆ ಮೂಲಕ ಮಾಡಿದ ಸೇವಾ ಕಾರ್ಯ ಸ್ತುತ್ಯರ್ಹವಾದುದು ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.
ಮೀಯಪದವು ಶೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕವು ವಿದ್ಯಾರ್ಥಿಗೆ ನಿರ್ಮಿಸಿಕೊಟ್ಟ ಮನೆಯ ಕೀಲಿ ಕೈ ಹಸ್ತಾಂತರಿಸಿ ಮಾತನಾಡಿದರು.
ಮೀಂಜ ಗ್ರಾಪಂ ಅಧ್ಯಕ್ಷ ಸುಂದರಿ ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮೀಂಜ ಗ್ರಾಪಂ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಸರಸ್ವತಿ, ವಾರ್ಡ್ ಸದಸ್ಯ ಮಿಸಿರಿಯ, ರುಕಿಯಾ ಸಿದ್ದಿಕ್, ಕುಸುಮಾ ಮೋಹನ್, ಜನಾರ್ದನ ಪೂಜಾರಿ, ರಾಷ್ಟ್ರೀಯ ಸೇವಾ ಯೋಜನೆಯ ವಿಭಾಗೀಯ ಸಂಚಾಲಕ ಹರಿದಾಸ್ ವಿ., ಜಿಲ್ಲಾ ಸಂಚಾಲಕ ಕೆ.ಎನ್.ಮನೋಜ್ ಕುಮಾರ್, ಕ್ಲಸ್ಟರ್ ಸಂಚಾಲಕ ಶ್ರೀನಾಥ್ ಇ., ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆ ಸಂಚಾಲಕ ಡಾ.ಜಯಪ್ರಕಾಶ ನಾರಾಯಣ, ಮುಖ್ಯಶಿಕ್ಷಕಿ ಮೃದುಲಾ ಕೆ.ಎಂ., ರಕ್ಷಕ- ಶಿಕ್ಷಕ ಸಂಘ ಅಧ್ಯಕ್ಷ ಕೃಷ್ಣ ಪ್ರಸಾದ್, ಹಿರಿಯ ಶಿಕ್ಷಕ ರವಿಲೋಚನ ಸಿ.ಎಚ್., ಸ್ಕೂಲ್ ಪ್ರೊಟೆಕ್ಷನ್ ಗ್ರೂಪ್ ಸಂಚಾಲಕ ಚಂದ್ರಶೇಖರ ಎಂ., ಸಲಹೆಗಾರ ಇಬ್ರಾಹಿಂ ಹೊನ್ನಕಟ್ಟೆ, ಹಳೇ ವಿದ್ಯಾರ್ಥಿ ಸಂಘದ ಪ್ರತಿನಿಧಿ ಶಶಿಕುಮಾರ್ ಕುಳೂರು, ರಜಾಕ್ ಮುಂತಾದವರು ಉಪಸ್ಥಿತರಿದ್ದರು.
ಮನೆಯ ಫಲಾನುಭವಿ ಅಬ್ದುಲ್ ರಜಾಕ್ ಅನಿಸಿಕೆ ಹಂಚಿಕೊಂಡರು. ಪ್ರಾಂಶುಪಾಲ ರಮೇಶ್ ಕೆ.ಎನ್. ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಶಾಲಾಮಟ್ಟದ ಸಂಚಾಲಕ ರಾಜೇಂದ್ರನ್ ಕೆ.ಪಿ. ವಂದಿಸಿದರು. ಶಿಕ್ಷಕ ಹರೀಶ ಜಿ. ಕಾರ್ಯಕ್ರಮ ನಿರೂಪಿಸಿದರು.