ಜಿಲ್ಲೆ

ಮನೆ ಕೀಲಿ ಮುರಿದು ಆಭರಣ ಕಳ್ಳತನ

ಹುಬ್ಬಳ್ಳಿ: ಮನೆ ಕೀಲಿ ಮುರಿದು 2.03 ಲಕ್ಷ ರೂ. ಮೌಲ್ಯದ ಆಭರಣ ಕಳ್ಳತನವಾದ ಘಟನೆ ಹಳೇಹುಬ್ಬಳ್ಳಿ ಪ್ರಶಾಂತನಗರದಲ್ಲಿ ನಡೆದಿದೆ.
ಸುರೇಶ ಬಂಕಾಪುರ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. 220 ಗ್ರಾಂ ಬಂಗಾರ, 11 ಸಾವಿರ ರೂ. ಮೌಲ್ಯದ ಬೆಳ್ಳಿ, 40 ಸಾವಿರ ನಗದು ಕಳ್ಳತನವಾಗಿದೆ. ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.