ಜಿಲ್ಲೆ

ಸಮಾಜ ಸೇವಾ ಕ್ಷೇತ್ರದ ಸಾಧನೆ ಮಾದರಿ : ಡಾ.ಹರಿಕೃಷ್ಣ ಪುನರೂರು ಹೇಳಿಕೆ

ಸೌಮ್ಯ ಆರ್

ಮೂಲ್ಕಿ: ಸಮಾಜದ ದೀನ ವರ್ಗದ ಸೇವೆಯಲ್ಲಿ ಲಯನ್ಸ್ ಮುಂಚೂಣಿಯಲ್ಲಿದ್ದು ಶೈಕ್ಷಣಿಕ, ಆರೋಗ್ಯ ಸಮಾಜ ಸೇವಾ ಕ್ಷೇತ್ರದಲ್ಲಿ ಸೇವಾ ಸಾಧನೆ ಮಾದರಿ ಎಂದು ಲಯನ್ಸ್ ಮಾಜಿ ಗವರ್ನರ್ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.

ಲಯನ್ಸ್ ಇಂಟರ್ ಕ್ಲಬ್ ನ್ಯಾಷನಲ್ ಪ್ರಾಂತ್ಯ 10ರ ವಲಯ 1 ಹಾಗೂ ಮೂಲ್ಕಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಪ್ರಾಯೋಜಕತ್ವದಡಿ ಶನಿವಾರ ಮಾನಂಪಾಡಿ ಪೆರ್ಮಾರಿ ಗುತ್ತು ಬಳಿ ಜಾನಮ್ಮ ಪೂಜಾರಿ ಕುಟುಂಬಸ್ಥರಿಗೆ ಉಚಿತವಾಗಿ ನಿರ್ಮಿಸಲಾದ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಯನ್ಸ್ ಜಿಲ್ಲಾ ಗವರ್ನರ್ ಬಿ.ಎಂ.ಭಾರತಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೂರು ನಿರ್ಮಿಸುವ ಮೂಲಕ ಅವರ ಬದುಕಿಗೆ ಸಹಾಯ ಹಸ್ತ ಕಾರ್ಯಕ್ರಮ ಶ್ಲಾಘನೀಯ ಎಂದರು.

ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಸದಸ್ಯೆ ವಂದನಾ ಕಾಮತ್, ಹರ್ಷರಾಜ ಶೆಟ್ಟಿ ಅಭಿನಂದನಾ ಮಾತನಾಡಿದರು. ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಲ್ಫಿ ಡಿಕೋಸ್ಟ ಅಧ್ಯಕ್ಷತೆ ವಹಿಸಿದ್ದರು.

ನಿಯೋಜಿತ ಗವರ್ನರ್ ಕುಡ್ಪಿ ಅರವಿಂದ ಶೆಣೈ, ನಿಯೋಜಿತ ಡೆಪ್ಯುಟಿ ಗವರ್ನರ್ ತಾರನಾಥ ಎಚ್.ಎಂ., ಗೋವರ್ಧನ ಶೆಟ್ಟಿ, ಪ್ರಾಂತೀಯ ಅಧ್ಯಕ್ಷ ಸುಜಿತ್ ಸಾಲ್ಯಾನ್, ವಲಯಾಧ್ಯಕ್ಷೆ ಶೀತಲ್ ಸುಶೀಲ್, ಚಂದ್ರಶೇಖರ್ ನಾಣಿಲ್, ವೆಂಕಟೇಶ ಹೆಬ್ಬಾರ್, ಪ್ರಬೋಧ್ ಕುಡ್ವ, ಭಾನುಮತಿ ಶೆಟ್ಟಿ ಕಕ್ವಗುತ್ತು, ಲಿಯೋ ಸಿಂಚನ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಉದಯ ಅಮೀನ್ ಮಟ್ಟು ಕಾರ್ಯಕ್ರಮ ನಿರೂಪಿಸಿದರು.