ಜಿಲ್ಲೆ

ವಿದ್ಯಾರ್ಥಿನಿ ಪೂರ್ವಿಕಾಗೆ ಮನೆ ಹಸ್ತಾಂತರ

ಇಂದಿರಾ ಎನ್ ಕೆ

ಬೈಂದೂರು: ಬೆಂಗಳೂರಿನ ಗೀತಾ ಎಲ್.ಎನ್.ಶೆಟ್ಟಿ ಅವರು ತಮ್ಮ ತಂದೆ ತಾಯಿ ಬಿ.ಎಲ್.ಎನ್.ರೈ ಮತ್ತು ಲಲಿತಾ ರೈ ನೆನಪಿನಲ್ಲಿ ನಿರ್ಮಿಸಿದ ಮನೆ ‘ಲಲಿತಾ ನಿವಾಸ’ವನ್ನು ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವಿಭಾಗದಲ್ಲಿ ಆಯ್ಕೆಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮರವಂತೆ ಪೂರ್ವಿಕಾ ಕುಟುಂಬಕ್ಕೆ ಹಸ್ತಾಂತರಿಸಿದರು.

ಗಾಯತ್ರಿ ಶೆಟ್ಟಿ, ಸೊಸೆ ಶ್ವೇತಾ ಶೆಟ್ಟಿ, ಮಡಾಮಕ್ಕಿ ಶಶಿಧರ ಶೆಟ್ಟಿ, ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯಾ, ಕಿಶೋರ್ ಸಿ.ಉದ್ಯಾವರ, ಎಚ್.ಎನ್.ವೆಂಕಟೇಶ್, ಗಣಪತಿ ಭಟ್, ನಾರಾಯಣ ಎಂ.ಹೆಗಡೆ ಇದ್ದರು.