ಹೆಬ್ರಿ: ಅನಾರೋಗ್ಯ ಹಾಗೂ ತೀರಾ ಬಡತನದಲ್ಲಿದ್ದ ಪಾಡಿಗಾರ ಐದು ಸೆಂಟ್ಸ್ ನಿವಾಸಿ ಉದಯ್ ಪೂಜಾರಿ ಕುಟುಂಬಕ್ಕೆ ಪೆರ್ಡೂರು ಗೆಳೆಯರ ಬಳಗದಿಂದ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ಭಾನುವಾರ ನಡೆಯಿತು.
ತಂಡದ ಸದಸ್ಯರು ಗೃಹಪ್ರವೇಶದ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪೆರ್ಡೂರು ಗೆಳೆಯರ ಬಳಗದ ಸ್ಥಾಪಕಾಧ್ಯಕ್ಷ ಸತೀಶ್ ಪಿ., ಗೌರವಾಧ್ಯಕ್ಷ ಸತೀಶ್, ಅಧ್ಯಕ್ಷ ನಿತಿನ್ ಮೆಂಡನ್, ಕಾರ್ಯದರ್ಶಿ ಮಂಜುನಾಥ ಶೆಟ್ಟಿ, ಗೌರವ ಸಲಹೆಗಾರ ಸತೀಶ್ ಶೆಟ್ಟಿ ಕುತ್ಯಾರುಬೀಡು, ಕೋಶಾಧಿಕಾರಿ ನಿಶ್ವಲ್ ಶೆಟ್ಟಿ, ಫಲಾನುಭವಿ ಉದಯ ಪೂಜಾರಿ ಮನೆಯವರು ಉಪಸ್ಥಿತರಿದ್ದರು.
14 ವರ್ಷಗಳಿಂದ ಪೆರ್ಡೂರು ಸುತ್ತಮುತ್ತ ಪ್ರದೇಶಗಳಲ್ಲಿ ಸಮಾಜಮುಖಿ ಚಟುವಟಿಕೆ ಜತೆ ಅಶಕ್ತರಿಗೆ ಸಹಾಯ ಧನ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಸಹಾಯ, ರಕ್ತದಾನ ಆರೋಗ್ಯ ತಪಾಸಣಾ ಶಿಬಿರಗಳು, ಬಡ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಸೇರಿದಂತೆ ಪ್ರತಿ ವರ್ಷ ಸುಮಾರು 2 ಲಕ್ಷಕ್ಕೂ ಅಧಿಕ ಸಹಾಯಸ್ತ ನೀಡಿದೆ. ಶಾಶ್ವತ ಸೇವಾ ಯೋಜನೆಯಾಗಿ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿದೆ.