ಜಿಲ್ಲೆ

ಗೇಟ್ ಮೇಲಿಂದ ಬಿದ್ದು 11 ವರ್ಷದ ಬಾಲಕ ಸಾವು

Haveri - Kariyappa Aralikatti

ರಾಣೆಬೆನ್ನೂರ: ಮನೆ ಮುಂದಿನ ಗೇಟ್ ಹತ್ತಿ ಇಳಿಯುವಾಗ ತಲೆ ಹಚ್ಚಿ ನೆಲಕ್ಕೆ ಬಿದ್ದು ಬಾಲಕನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಉದಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮೇಡ್ಲೇರಿ ಗ್ರಾಮದ ದಿಲೀಪ್ ದುರ್ಗಪ್ಪ ಆನ್ವೇರಿ (11) ಮೃತ ಬಾಲಕ.
ಈತ ಮನೆ ಮುಂದಿನ ಗೇಟ್ ಹತ್ತಿ ಇಳಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ತಲೆ ಹಚ್ಚಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.