ಹಾವೇರಿ: ಮನೆಯ ಮೇಲ್ಛಾವಣಿಗೆ ಹಾಕಿದ್ದ ಸಿಮೆಂಟ್ ಸೀಟು ಸೋರುವುದನ್ನು ಸರಿಪಡಿಸಲು ಹೋದ ವ್ಯಕ್ತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಶಿವಾಜಿ ನಗರ ತಾಂಡಾದಲ್ಲಿ ಸೋಮವಾರ ನಡೆದಿದೆ.
ತಿಪ್ಪಣ್ಣ ಹೇಮಲಪ್ಪ ಲಮಾಣಿ (55) ಮೃತ ವ್ಯಕ್ತಿ.
ಇವರು ಮಳೆ ಬಂದಾಗ ಮನೆಯ ಮೇಲ್ಛಾವಣಿಯ ಸಿಮೆಂಟ್ ಸೀಟು ಸೋರುತ್ತದೆ ಎಂದು ತಾಡಪತ್ರಿ ಹಾಕುವ ಸಲುವಾಗಿ ಮನೆ ಮೇಲೆ ಹತ್ತಿದ್ದರು. ಈ ಸಮಯದಲ್ಲಿ ಸಿಮೆಂಟ್ ಸೀಟು ಮುರಿದು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.