ಎನ್.ಆರ್.ಪುರ ತಾಲೂಕು ಮಾಕೋಡು ಸಜಿ ಅವರ ಮನೆಗೆ ಬಿದ್ದ ಬೆಂಕಿಯನ್ನು ಅಗ್ನಿ ಶಾಮಕದಳದವರು ನಂದಿಸಿದರು. 
ಜಿಲ್ಲೆ

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಕಡಹಿನಬೈಲು ಗ್ರಾಮ ಪಂಚಾಯಿತಿ ಮಾಕೋಡು ಸಜಿ ಎಂಬುವವರ ಮನೆಗೆ ಭಾನುವಾರ ಬೆಂಕಿ ಬಿದ್ದು ಛಾವಣಿ ಹಾಗೂ ಗೃಹೋಪಯೋಗಿ ವಸ್ತುಗಳು ಸುಟ್ಟುಕರಕಲಾಗಿವೆ.

ಅಗ್ನಿ ಅವಘಡ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಪಿಡಿಒ ವಿಂಧ್ಯಾ ಸ್ಥಳ ಪರಿಶೀಲಿಸಿದರು. ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಸ್ಥಳಕ್ಕೆ ಭೇಟಿ ನೀಡಿ ಸಜಿ ಧೈರ್ಯ ತುಂಬಿ ವೈಯಕ್ತಿಕವಾಗಿ 5 ಸಾವಿರ ರೂಪಾಯಿ ನೀಡಿ ಸಹಾಯ ಮಾಡಿದರು.