ಜಿಲ್ಲೆ

ಮನೆ ಬಾಗಿಲು ಮುರಿದು 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

Haveri - Kariyappa Aralikatti

ರಾಣೆಬೆನ್ನೂರ: ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಇಲ್ಲಿಯ ಕಮಲಾ ನಗರದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಪ್ರಕಾಶ ಗಂಗಪ್ಪ ಪವಾಡಿ ಎಂಬುವರ ಮನೆ ಕಳ್ಳತನ ಮಾಡಿರುವುದು.

ಇವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಯಾರೋ ಖದೀಮರು ಮನೆ ಬಾಗಿಲು ಬೀಗ ಮುರಿದು ಒಳಗೆ ನುಗ್ಗಿ ಚಿನ್ನದ ಮಾಂಗಲ್ಯ ಸರ ಸೇರಿ 1.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.