ಭಾರಿ ಮಳೆಗೆ ಕೊಟೋಳಿ ಗ್ರಾಮದಲ್ಲಿ ಕುಸಿದ ಮನೆಯನ್ನು ಗ್ರಾಪಂ ಅಧ್ಯಕ್ಷ ಜಪ್ರಿ ಉತ್ತಪ್ಪ, ಪಿಡಿಒ ಬಿ.ಮಣಿ, ಅನುಷಾ ವೀಕ್ಷಿಸಿದರು. ಇಸ್ಮಾಯಿಲ್ ನಬೀಸ ಇದ್ದರು. 
ಜಿಲ್ಲೆ

ಭಾರಿ ಮಳೆಗೆ ಮನೆ ಕುಸಿತ

ಲೋಕೇಶ್ ಮನು. ಡಿ

ವಿರಾಜಪೇಟೆ: ಎರಡು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಗೆ ಕೆದಮುಳ್ಳೂರು ಪಂಚಾಯಿತಿ ವ್ಯಾಪ್ತಿಯ ಕೊಟ್ಟೋಳಿ ಗ್ರಾಮದಲ್ಲಿ ಮನೆ ಕುಸಿದಿದೆ.


ವಿರಾಜಪೇಟೆ ತಾಲೂಕಿನ ಕೊಟ್ಟೋಳಿ ಗ್ರಾಮದ ವೃದ್ಧೆ ಎಂ.ಯು.ನಭೀಸಾ ಅವರ ಮನೆ ಬುಧವಾರ ತಡರಾತ್ರಿ ಭಾರಿ ಮಳೆಗೆ ಕುಸಿದಿದೆ. ಎಡಬಿಡದೆ ಸುರಿಯುತಿದ್ದ ಮಳೆಗೆ ಕೆಲ ದಿನಗಳಿಂದ ನಭೀಸಾ ಅವರು ವಾಸವಿದ್ದ ಮನೆ ಗೋಡೆ ಒಂದು ಅಂಚು ಕುಸಿದಿತ್ತು. ನೆರೆಹೊರೆಯವರು ಇದನ್ನು ಗಮನಿಸಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದ ವೃದ್ಧೆಯನ್ನು ಸಂಬಂಧಿಕರ ಮನೆಗೆ ತೆರಳುವಂತೆ ಕಳುಹಿಸಿದ್ದರು. ನಭೀಸಾ ಅವರು ಮನೆ ಬಿಟ್ಟು ತನ್ನ ಮಗಳ ಮನೆಯಲ್ಲಿ ವಾಸವಾಗಿದ್ದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೆದಮುಳ್ಳೂರು ಗ್ರಾಪಂ ಅಧ್ಯಕ್ಷ ಜೆಫ್ರಿ ಉತ್ತಪ್ಪ, ಸದಸ್ಯರಾದ ಎಂ.ಎಂ.ಇಸ್ಮಾಯಿಲ್, ಪಿಡಿಒ ಬಿ.ಮಣಿ, ಗ್ರಾಮಲೆಕ್ಕಿಗ ಅನುಷಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.

ಚಿತ್ರ ಅಳವಡಿಸಲಾಗಿದೆ