ತರೀಕೆರೆ: ತಾಲೂಕಿನೆಲ್ಲೆಡೆ ಶುಕ್ರವಾರ ವರ್ಷಧಾರೆಯಾಗುತ್ತಿದ್ದು ಸೀತಾಪುರ ಕಾವಲಿನಲ್ಲಿ ಮನೆ ಕುಸಿದಿದೆ.
ಸಿದ್ದರಹಳ್ಳಿ, ಯಲುಗೆರೆ, ಲಕ್ಕವಳ್ಳಿ, ಹಲಸೂರು, ಕೆಂಚಿಕೊಪ್ಪ, ಬಾವಿಕೆರೆ, ಬರಗೇನಹಳ್ಳಿ, ಸೀತಾಪುರ ಕಾವಲು, ದುಗ್ಲಾಪುರ, ಲಿಂಗದಹಳ್ಳಿ, ಉಡೇವಾ, ಗುಳ್ಳದಮನೆ, ತ್ಯಾಗದಬಾಗಿ, ಸುಣ್ಣದಹಳ್ಳಿ, ನಂದಿ, ಬೆಟ್ಟದಹಳ್ಳಿ, ಕೋರನಹಳ್ಳಿ ಇತರ ಕಡೆಗಳಲ್ಲಿ ಪುಷ್ಯಾ ಮಳೆ ಚುರುಕಾಗಿದೆ. ಶುಕ್ರವಾರ ಬೆಳಗಿನ ಜಾವ ವರುಣನ ಅಬ್ಬರಕ್ಕೆ ಸೀತಾಪುರ ಕಾವಲಿನ ಅನಿಯಮ್ಮ ಎಂಬುವವರ ಮನೆ ಕುಸಿದಿದೆ. ಕುಟುಂಬಸ್ಥರು ಮಲಗಿದ್ದರಾದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಿಡಿಒ ಸಿ.ರವಿನಾಯ್ಕ, ಗ್ರಾಮಲೆಕ್ಕಾಧಿಕಾರಿ ಟಿ.ಎಸ್.ಪ್ರದೀಪ್, ಗ್ರಾಪಂ ಸದಸ್ಯ ಸಿ.ವೀರಮಣಿ, ಮಾಜಿ ಅಧ್ಯಕ್ಷ ವೇಲಾಯುಧನ್ ಸ್ಥಳ ಪರಿಶೀಲಿಸಿದರು.