ಯಳ್ಳಂಬಳಸೆ ಗ್ರಾಮದ ಮಹೇಶ್ ಅವರ ಮನೆ ಛಾವಣಿ ಸುಟ್ಟಿರುವುದು. 
ಜಿಲ್ಲೆ

ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ

ಕಡೂರು: ಯಳ್ಳಂಬಳಸೆ ಗ್ರಾಮದಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡು ಗೃಹೋಪಯೋಗಿ ವಸ್ತುಗಳು ಸುಟ್ಟುಹೋಗಿವೆ.

ಮಹೇಶ್ ಎಂಬುವರ ಮನೆಯಲ್ಲಿ ಶನಿವಾರ ಅಗ್ನಿ ಅವಘಡ ಸಂಭವಿಸಿ ವಸ್ತುಗಳು ಸುಟ್ಟುಕರಕಲಾಗಿದ್ದು, ಛಾವಣಿಯೂ ಸುಟ್ಟುಹೋಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದರು.