ಜಿಲ್ಲೆ

ಮನೆಗೆ ನುಗ್ಗಿ ಕಳವುಗೈದಾತ ಸೆರೆ : ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶ

ಇಂದಿರಾ ಎನ್ ಕೆ

ಮೂಲ್ಕಿ: ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಮನೆಯಿಂದ ಚಿನ್ನಾಭರಣ ಕಳವುಗೈದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಇಂದಾವರ ಉಪ್ಪಳ್ಳಿ ಮಸೀದಿ ಬಳಿಯ ನಿವಾಸಿ ಅಬೂಬಕರ್ ಯಾನೆ ಆಲಿಯಾಸ್ ಇತ್ತೆ ಬರ್ಪೆ ಅಬೂಬಕ್ಕರ್(69) ಬಂಧಿತ.
ಜುಲೈ 3ರಂದು ಬಳ್ಕುಂಜೆ ಗ್ರಾಮದ ನೀರಲ್ಕೆ ಎಂಬಲ್ಲಿ ಸ್ಥಳೀಯ ನಿವಾಸಿ ಸಾಗೀರ ಎಂಬುವರ ಮನೆಯ ಹಿಂಬಾಗಿಲಿನ ಚಿಲಕ ಮುರಿದು ಮನೆಯ ಕಪಾಟಿನ ಒಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಿದ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂಲ್ಕಿ ಠಾಣಾ ನಿರೀಕ್ಷಕ ವಿದ್ಯಾಧರ್ ಹಾಗೂ ಎಸ್‌ಐ ವಿನಾಯಕ್ ಬಾವಿಕಟ್ಟೆ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ, ಆತನಿಂದ ಕಳವು ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್, 1,39,400 ರೂ. ಮೌಲ್ಯದ 16 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.