ಜಿಲ್ಲೆ

ಐಷಾರಾಮಿ ಹೋಟೆಲ್‌ನಲ್ಲಿ ಕಾಲ ಕಳೆಯಲು ಆಫರ್, ಮಹಿಳೆಗೆ 1.3 ಲಕ್ಷ ರೂ. ವಂಚನೆ

ಶಿವಮೊಗ್ಗ: ಹೊಸ ಕಾರು ಖರೀದಿ ಮಾಡಿದ್ದರಿಂದ ಐಷಾರಾಮಿ ಹೋಟೆಲ್‌ನಲ್ಲಿ ಎರಡು ರಾತ್ರಿ, ಮೂರು ಹಗಲು ಕಾಲ ಕಳೆಯಲು ಆಫರ್ ಬಂದಿದೆ ಎಂದು ಎಂಬಿಸಿ ಮಹಿಳೆಯಿಂದ 1.3 ಲಕ್ಷ ರೂ. ಪಡೆದು ವಂಚನೆ ಮಾಡಲಾಗಿದೆ. ಸವಳಂಗ ರಸ್ತೆಯ ಮಹಿಳೆ ವಂಚನೆಗೆ ಒಳಗಾದವರು.

ಗ್ರಾೃಂಡ್ ವಿವಾಂತ್ ಹಾಲಿಡೇಶ್ ಕಂಪನಿ ಹೆಸರಲ್ಲಿ ಜು.31ರಂದು ಮಹಿಳೆಗೆ ಅವರಿಗೆ ಕರೆ ಮಾಡಿದ್ದ ಅಪರಿಚಿತನೊಬ್ಬ ಹೊಸ ಕಾರು ಖರೀದಿಸಿದ ಕಾರಣ ನಿಮಗೆ ಕೊಡುಗೆಗಳಿವೆ. ನೀವು ಇಷ್ಟ ಪಟ್ಟ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ ಎರಡ್ಮೂರು ದಿನ ಕಾಲ ಕಳೆಯಬಹುದುಎಂದು ನಂಬಿಸಿದ್ದ. ಅನಿತಾ ಅವರನ್ನು ಸಾಗರ ರಸ್ತೆಯ ಹೋಟೆಲ್‌ಗೆ ಕರೆಸಿಕೊಂಡು ಹಾಲಿಡೇಶ್ ಪ್ಯಾಕೇಜ್ ಬಗ್ಗೆ ಹೇಳಿ 1.3 ಲಕ್ಷ ರೂ. ಪಡೆದಿದ್ದ.

ಅದೇ ದಿನ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವುದು ಅರಿವಾಗಿದ್ದು ತಕ್ಷಣವೇ ಹಣ ಹಿಂದಿರುಗಿಸುವಂತೆ ಕೇಳಿದ್ದರು. ಕಂಪನಿ ಅಕೌಂಟ್‌ಗೆ ಹಣ ಜಮಾ ಆಗಿದ್ದು ನಾಳೆ (ಆ.1) ಕೊಡುವುದಾಗಿ ಹೇಳಿದ್ದ. ಆನಂತರ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ವಂಚನೆಗೆ ಒಳಗಾದ ಮಹಿಳೆ ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.