ಹಾವೇರಿ: ಉದ್ಯೋಗ ಕೊಡಿಸುವ ಹಾಗೂ ಹೋಟೆಲ್ಗಳಿಗೆ ರೇಟಿಂಗ್ಸ್ ಕೊಡಿಸುವ ನೆಪದಲ್ಲಿ ಯುವಕನೊಬ್ಬನಿಗೆ 3.61 ಲಕ್ಷ ರೂ. ವಂಚಿಸಿರುವ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ನಗರದ ನಿವಾಸಿ ರಾಕೇಶ ಶಿವಬಸಪ್ಪ ಕರಜಗಿ (23) ಎಂಬುವರಿಗೆ ವಂಚಿಸಿರುವುದು.
ಈತನಿಗೆ ಫೋನ್ ಮಾಡಿ ಗುಡುವಂಚೆರಿ ಚೆಟ್ಟಿನಾಡ ರೆಸ್ಟೋರೆಂಟ್ ಅಸಿಸ್ಟಂಟ್ ಎಚ್ಆರ್ ಅನುಮುಲಾ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ "ನನಗೆ ಆನ್ಲೈನ್ನಲ್ಲಿ ಕೆಲಸಗಾರರು ಬೇಕಾಗಿದ್ದಾರೆ. ಮೇಸೆಜ್ ಮಾಡಿ ದಿನಕ್ಕೆ 5ರಿಂದ 8 ಸಾವಿರ ರೂ. ದುಡಿಯಬಹುದು ಎಂದು ನಂಬಿಸಿದ್ದಾನೆ. ಅಲ್ಲದೆ ಒಂದು ಟಾಸ್ಕ್ನಲ್ಲಿ ವಿವಿಧ ಹೋಟೆಲ್ಗಳಿಗೆ ರೇಟಿಂಗ್ಸ್ ಕೊಡಬೇಕು' ಎಂದು ಹೇಳಿ ಲಿಂಕ್ವೊಂದನ್ನು ಕಳುಹಿಸಿ ಅದರ ಮೂಲಕ ರಾಕೇಶನ ಖಾತೆಯಿಂದ 3.61 ಲಕ್ಷ ರೂ. ವಂಚಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.