ಜಿಲ್ಲೆ

ರಸ್ತೆಗೆ ಹಾಲು ಸುರಿದು ರೈತರ ಪ್ರತಿಭಟನೆ

ಹೊಸೂರು: ತಮಿಳುನಾಡು ರೈತರ ಸಂರಕ್ಷಣಾ ಸಂಘದಿಂದ ಹಾಲಿನ ದರ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪಟ್ಟಣದ ಡೆಂಕಣಿಕೋಟೆ ರಸ್ತೆಯಲ್ಲಿರುವ ಬೆಣ್ಣಂಗುರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಎದುರು ರಸ್ತೆಗೆ ಹಾಲು ಸುರಿದು ರೈತರು ಪ್ರತಿಭಟನೆ ಮಾಡಿದರು.
ಇತ್ತೀಚಿನ ದಿನಗಳಲ್ಲಿ ಹಾಲು ಉತ್ಪಾದನೆ ಜತೆಗೆ ಹಾಲಿನ ದರವೂ ಕಡಿಮೆಯಾಗಿದ್ದು, ಹಸುವಿಗೆ ಹಾಕುವ ಮೇವು ಮತ್ತು ಬೂಸಾ ಹಿಂಡಿ ಸೇರಿ ಹಲವು ಪದಾರ್ಥಗಳ ಬೆಲೆ ಗಗನಕ್ಕೆರಿವೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ತಮಿಳುನಾಡು ಸರ್ಕಾರ ಆಹಾರ ಪದಾರ್ಥಗಳ ಬೆಲೆ ತಗ್ಗಿಸಬೇಕು. ಸಹಕಾರ ಸಂಘಗಳಲ್ಲಿ ನೀಡುವ ಹಸುಸಾಲ ಮೊತ್ತವನ್ನು ಹೆಚ್ಚಿಸುವ ಜತೆಗೆ ಹೈನುಗಾರಿಕೆ ವಿಮೆ ಉಚಿತವಾಗಿ ಮಾಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಪಶ್ಚಿಮ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಿಲ್ಲಾ ಖಜಾಂಚಿ ಮುನಿರಾಜ್ ಸದ್ಗುರು, ನಾರಾಯಣನ್, ಸೆಲ್ವಂ ಸುಬ್ರಮಣಿ, ಜಿಲ್ಲಾ ಕಾರ್ಯದರ್ಶಿ ಗಣೇಶನ್ ಇದ್ದರು.