accident 
ಜಿಲ್ಲೆ

ಅಪಘಾತದಲ್ಲಿ ಇಬ್ಬರ ಸಾವು, ಬಸ್‌ಗಳು ಜಖಂ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಹೊಸೂರು
ಕೆಳಮಂಗಲದ ಬಳಿ ದ್ವಿಚಕ್ರವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ ದ್ವಿಚಕ್ರವಾಹನದಲ್ಲಿ ಸಂಚರಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಬೋಡಿಚಿಪಲ್ಲಿ ಗ್ರಾಮದ ಕುಮಾರ್ (50) ಹಾಗೂ ಗಣೇಶ್ ಮೃತರು. ಸ್ಥಳಕ್ಕೆ ದಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಅಪಘಾತ ಮಾಡಿದ ಚಾಲಕನನ್ನು ವಶಕ್ಕೆ ಪಡೆದು ಬಸ್ ಜಪ್ತಿ ಮಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸ್ಥಳೀಯರು ಅಪಘಾತ ಮಾಡಿದ ಟಾಟಾ ಎಲೆಕ್ಟ್ರಾನಿಕ್ಸ್‌ನ ಖಾಸಗಿ ಕಾರ್ಖಾನೆಯ ಬಸ್ ಹಾಗೂ ಅದೇ ಕಾರ್ಖಾನೆಗೆ ಸೇರಿದ ಇನ್ನು 6 ಬಸ್‌ಗಳಿಗೆ ಕಲ್ಲುತೂರಿ ಜಖಂಗೊಳಿಸಿದ್ದಾರೆ.
ಕೂಲಿಕಾರ್ಮಿಕರಾಗಿದ್ದ ಕುಮಾರ್ ಹಾಗೂ ಗಣೇಶ್ ದ್ವಿಚಕ್ರವಾಹನದಲ್ಲಿ ಸಾಗುತ್ತಿದ್ದರು. ಇದೇ ವೇಳೆ ಕಾರ್ಖಾನೆಯ ಸಿಬ್ಬಂದಿಯನ್ನು ಕರೆತರುತ್ತಿದ್ದ ಬಸ್ ಹಿಂದಿನಿಂದ ಡಿಕ್ಕಿಯೊಡೆದಿದೆ. ಅಪಘಾತದಲ್ಲಿ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಗಣೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.
ವಾಹನ ದಟ್ಟಣೆ:ಅಪಘಾತ ನಡೆಸ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಆಕ್ರೋಶಗೊಂಡು ಅಪಘಾತ ಮಾಡಿದ ಬಸ್‌ನ್ನು ಜಖಂಗೊಳಿಸಿದ್ದಾರೆ. ಇದೇ ವೇಳೆ ಅದೇ ಮಾರ್ಗವಾಗಿ ಬಂದ ಟಾಟಾ ಎಲೆಕ್ಟ್ರಾನಿಕ್ಸ್‌ನ ಖಾಸಗಿ ಕಾರ್ಖಾನೆಯ 6 ಬಸ್‌ಗಳು ಸ್ಥಳೀಯರ ಆಕ್ರೋಶಕ್ಕೆ ನಜ್ಜುಗುಜ್ಜಾಗಿವೆ. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಎಸ್‌ಪಿ ತಂಗದುರೈ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಲಘು ಲಾಠಿ ಪ್ರಹಾರದ ಮೂಲಕ ಪರಿಸ್ಥಿತಿ ತಹಬಂದಿಗೆ ತಂದರು. ಈ ವೇಳೆ ಕಿ.ಮೀ ಗಟ್ಟಲೆ ವಾಹನ ದಟ್ಟಣೆ ಏರ್ಪಟ್ಟಿತ್ತು. ಸಂಚಾರ ಪೊಲೀಸರು ವಾಹನಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.