ಜಿಲ್ಲೆ

ಹಾಸ್ಟೆಲ್ ವಾರ್ಡ್‌ನ್ ಸಸ್ಪೆಂಡ್

Chitradurga

ಚಿತ್ರದುರ್ಗ: ಮೊಳಕಾಲ್ಮೂರಿನ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿ ನಿಲಯದ ವಾರ್ಡನ್ ಕೇಶವಮೂರ್ತಿ ಅವರನ್ನು ಹಣ ಮತ್ತು ಅಕ್ಕಿ ದುರುಪಯೋಗದ ಆರೋಪದಡಿ ಸೇವೆಯಿಂದ ಅಮಾನತು ಮಾಡಿ ಜಿಪಂ ಸಿಒ ಎಂ.ಎಸ್.ದಿವಾಕರ್ ಆದೇಶಿಸಿದ್ದಾರೆ.

ಮೂರು ಲಕ್ಷ ರೂ. ಅಧಿಕ ಸರ್ಕಾರಿ ಅನುದಾನವನ್ನು ಸ್ವಂತಕ್ಕೆ ಬಳಸಿಕೊಂಡಿರುವುದು ಹಾಗೂ 20 ಕ್ವಿಂಟಾಲ್ ಅಕ್ಕಿ ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿ ಇಲಾಖೆ ತನಿಖೆಯನ್ನು ಕಾಯ್ದಿರಿಸಿ ಫೆ.3ರಂದು ಕೇಶವಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಿರುವುದಾಗಿ ದಿವಾಕರ್ ತಿಳಿಸಿದ್ದಾರೆ.