ಜಿಲ್ಲೆ

ಹೊಸಸಿದ್ದಾಪುರ ಶ್ರೀ ಚೌಡೇಶ್ವರಿ ಜಾತ್ರೆ ಸಂಪನ್ನ

Shivamogga - Desk - Megha MS

ಭದ್ರಾವತಿ: ತಾಲೂಕಿನ ಹೊಸಸಿದ್ದಾಪುರದ ಶ್ರೀಚೌಡೇಶ್ವರಿ ಜಾತ್ರಾ ಮಹೋತ್ಸವವು ಮಂಗಳವಾರ ಅದ್ದೂರಿಯಾಗಿ ಸಂಪನ್ನಗೊAಡಿತು. ಮೂರು ದಿನಗಳ ಜಾತ್ರೆಯಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಮಂಗಳವಾರ ಗ್ರಾಮದ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಸಾಗಿ ಶ್ರೀ ಚೌಡೇಶ್ವರಿ ದೇವಿಗೆ ತಂಬಿಟ್ಟಿನ ಆರತಿ ಬೆಳಗಿ ತಂಬಿಟ್ಟು, ಮೊಸರನ್ನ ಪ್ರಸಾದವನ್ನು ಸಮರ್ಪಿಸಿದರು. ಜಾತ್ರೆ ಅಂಗವಾಗಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ತಂಬಿಟ್ಟಿನ ಆರತಿ ಬೆಳಗಿ ಸರ್ವರಿಗೂ ಶುಭ ಕೋರಿದರು. ಜಿಂಕ್‌ಲೈನ್, ಜನ್ನಾಪುರ, ಹಳೇಸಿದ್ದಾಪುರ, ಸಂಕ್ಲೀಪುರ, ನಂಜಾಪುರದ ನೂರಾರು ಭಕ್ತರು ಪಾಲ್ಗೊಂಡಿದ್ದರು.