ಸಿರಿಗೇರಿಗೆ ಭೇಟಿ ನೀಡಿದ್ದ ಶಾಸಕ ಬಿ.ಎಂ.ನಾಗರಾಜಗೆ 3ನೇ ವಾರ್ಡ್‌ನಲ್ಲಿನ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಿದರು. ಪ್ರಮುಖರಾದ ಸಿ.ಎಂ ನಾಗರಾಜ ಸ್ವಾಮಿ, ಬಿ ನಾಗೇಂದ್ರ, ಬಿ ಸೋಮಶೇಖರಪ್ಪ, ವಿ ರೇಣುಕಪ್ಪ, ಗರ್ಜಿ ಲಿಂಗಪ್ಪ ಇದ್ದರು. 
ಜಿಲ್ಲೆ

ಆಸ್ಪತ್ರೆ ಮೇಲ್ದರ್ಜೆಗೇರಿಸುವ ಭರವಸೆ ಹುಸಿ

ಸಿರಿಗೇರಿ: ಗ್ರಾಮದ ಅಂಗಡಿಯೊಂದರ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಬಿಎಂ ನಾಗರಾಜಗೆ ಗ್ರಾಮಸ್ಥರು ಸಮಸ್ಯೆಗಳ ಸರಮಾಲೆ ಮುಂದಿಟ್ಟರು.

ನಿಮಗಾಗಿ ನಾವು ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿ, ಪ್ರಾಥಮಿಕ ಅರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರುಸುವಂತೆ 9 ದಿನ ಹೋರಾಟ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹೆಚ್ಚುವರಿ 12 ಬೆಡ್‌ಗಳ ವ್ಯವಸ್ಥೆ ಭರವಸೆ ಹುಸಿಯಾಗಿದೆ ಎಂದರು. ಜಿಲ್ಲಾಧಿಕಾರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿ ಎಂದು ಶಾಸಕ ನುಣಿಚಿಕೊಂಡರು.

3ನೇ ವಾರ್ಡ್‌ನ ಮಹಿಳೆಯರು ಮಾತನಾಡಿ, ಗ್ರಾಮದ ಎಲ್ಲ ಚರಂಡಿ ಮತ್ತು ಕೆರೆಯ ನೀರು 3ನೇ ವಾರ್ಡ್‌ನ ರಸ್ತೆಯ ಮೇಲೆ ಹರಿದು ಮನೆಗಳ ಮುಂದೆ ಸಂಗ್ರಹವಾಗುತ್ತಿದೆ. ಸಾರ್ವಜನಿಕರು ಬಿದ್ದು ಗಾಯಗೊಂಡಿದ್ದಾರೆ. ಈ ಹಿಂದೆ ಚುನಾವಣೆ ಬಹಿಷ್ಕಾರ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಪಿಡಿಒಗೆ ಕರೆ ಮಾಡಿದ ಶಾಸಕ, ಸಮಸ್ಯೆ ಸರಿಪಡಿಸುವಂತೆ ಸೂಚಿಸಿದರು.

ಪ್ರಮುಖರಾದ ಎಸ್.ಎಂ. ನಾಗರಾಜ ಸ್ವಾಮಿ, ಜಲಾಲಿ ಪೀರ, ವಸದ್ ಮಂಜುನಾಥ, ಹಳ್ಳಿ ಮರದ ನಾಗರಾಜ ಇತರರಿದ್ದರು.