ಜಿಲ್ಲೆ

ಆಸ್ಪತ್ರೆ ಉಳಿಸಿಕೊಳ್ಳಲು ಪ್ರತಿಭಟನೆಯ ಎಚ್ಚರಿಕೆ

ಸುನಿಲ್ ಪೊನ್ನೇಟಿ

ಕುಶಾಲನಗರ:

ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ಉಳಿಸಿಕೊಳ್ಳುವ ಸಂಬAಧ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ನಂಜರಾಯಪಟ್ಟಣ ಗ್ರಾ.ಪಂ. ಅಧ್ಯಕ್ಷ ಸಿ.ಎಲ್. ವಿಶ್ವ ಹೇಳಿದರು. ನಂಜರಾಯಪಟ್ಟಣದ ಸÀರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಜಾಗ ಒತ್ತುವರಿ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಗೆ ಅರಣ್ಯ ಇಲಾಖೆ ನೊಟೀಸ್ ನೀಡಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆಸಲಾದ ಆರೋಗ್ಯ ರಕ್ಷಾ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ನೊಟೀಸ್ ನೀಡಿರುವದರಿಂದ ಎದುರಾಗಿರುವ ಸಮಸ್ಯೆ ಮತ್ತು ಆಸ್ಪತ್ರೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಡೆದ ಸುದೀರ್ಘ ಚರ್ಚೆ ವೇಳೆ ಮಾತನಾಡಿದ ವಿಶ್ವ ಅರಣ್ಯ ಇಲಾಖೆಯಿಂದ ನಿರಂತರವಾಗಿ ಆರೋಗ್ಯ ಇಲಾಖೆಗೆ ನೊಟೀಸ್ ನೀಡಲಾಗುತ್ತಿದೆ. ಗ್ರಾಮದ 10/1 ರ ಸರ್ವೆ ನಂಬರ್ ನ ಪೈಸಾರಿ ಜಾಗದಲ್ಲಿ 1984 ರಲ್ಲಿ ಸ್ಥಾಪನೆಯಾದ ಆಸ್ಪತ್ರೆ ಉಳಿಸಿಕೊಳ್ಳಲು ಹೋರಾಟದ ಅಗತ್ಯವಿದೆ.

ಜಾಗ ದಾಖಲಾತಿ ನೋಂದಣಿಯಲ್ಲಿ ಲೋಪದೋಷ ಉಂಟಾದ ಪರಿಣಾಮ ಅರಣ್ಯ ಇಲಾಖೆ ಇದು ತಮಗೆ ಸೇರಿದ ಜಾಗ ಎಂದು ವಾದಿಸುತ್ತಿದೆ. ಈ ಬಗ್ಗೆ ಸಂಸದರು, ಶಾಸಕರ ಗಮನಕ್ಕೆ ತಂದು ಅವರ ಮೂಲಕ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಗ್ರಾಮಸ್ಥರು ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದರು.

ಈ ಸಂಬAದ ಗ್ರಾಮಸ್ಥರು ಚರ್ಚಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು, ಸೂಕ್ತ ದಾಖಲಾತಿಗಳ ಸಂಗ್ರಹ, ಕ್ಷೇತ್ರದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜನಸಂಪರ್ಕ ಸಭೆ ಹಮ್ಮಿಕೊಳ್ಳುವುದು ಸೇರಿದಂತೆ ಆಸ್ಪತ್ರೆ ಉಳಿಸಿಕೊಳ್ಳಲು ಹೋರಾಟ ರೂಪಿಸುವ ಬಗ್ಗೆ ಚರ್ಚೆ ನಡೆಯಿತು.

ಸಂಬAಧಿಸಿದವರು ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟ ಸಮಿತಿಯ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಇದೇ ವೇಳೆ ವಿಶ್ವ ತಿಳಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯ ಆರ್.ಕೆ. ಚಂದ್ರ, ರಕ್ಷಾ ಸಮಿತಿ ಸದಸ್ಯ ಕೆ.ವಿ. ಪ್ರೇಮಾನಂದ, ಗೌಡ ಸಮಾಜದ ಸೂರ್ಯ ಕುಮಾರ್, ಕೊಡವ ಸಮಾಜದ ಪೊನ್ನಪ್ಪ, ಎಸ್.ಎನ್.ಡಿ.ಪಿ.ಯ ನವೀನ್, ವೀರಶೈವ ಸಮಾಜದ ರತೀಶ್, ಪರಿಶಿಷ್ಟ ಜಾತಿ, ಪಂಗಡದ ಪ್ರಮುಖರಾದ ಶಾಂತಕುಮಾರ್, ಕಾಳಿಂಗ, ಮುಸ್ಲಿಂ ಕಮಿಟಿಯ ಅಬ್ಬಾಸ್, ಮುಸ್ತಾಫ, ವಿದ್ಯಾಸಂಘದ ಯತೀಶ್, ಗುಳಿಗ ಗಣಪತಿ ದೇವಾಲಯ ಸಮಿತಿಯ ಭುವನ್, ವೈದ್ಯಾಧಿಕಾರಿ ಡಾ. ಪ್ರತಾಪ್ ಸಾಗರ್ ಸೇರಿದಂತೆ ಸಂಘಸAಸ್ಥೆಗಳ ಪ್ರಮುಖರು, ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.