ಜಿಲ್ಲೆ

ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿ

Kopala - Desk - Eraveni

ಸಂಡೂರು: ತೋರಣಗಲ್‌ನ ಸರ್ಕಾರಿ ಸಮುದಾಯ ಕೇಂದ್ರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಶುಚಿಯಾಗಿಲ್ಲವೆಂದು ಎಸ್‌ಎಫ್‌ಐ ತಾಲೂಕು ಸಮಿತಿ ಆರೋಪಿಸಿದೆ.

ಸುಮಾರು ದಿನಗಳಿಂದ ನೀರಿನ ಘಟಕವನ್ನು ಸ್ವಚ್ಛ ಮಾಡಿಲ್ಲ. ರೋಗಿಗಳು ಅದೇ ನೀರನ್ನು ಸೇವನೆ ಮಾಡುತ್ತಿದ್ದಾರೆ. ಇದರಿಂದ ರೋಗಗಳು ಹರಡಬಹುದು. ವೈದ್ಯರು ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಬೇಕು. ಆಸ್ಪತ್ರೆಗೆ ಅಗತ್ಯವಾದ ವೈದ್ಯರು, ಸಿಬ್ಬಂದಿ ನೇಮಿಸಬೇಕೆಂದು ಎಸ್‌ಎಫ್‌ಐ ತಾಲೂಕು ಸಂಚಾಲಕ ಶಿವಾರೆಡ್ಡಿ ಆಗ್ರಹಿಸಿದ್ದಾರೆ.