ಮಡಿಕೇರಿ
ಪುಟ್ಟ ಜಿಲ್ಲೆ ಕೊಡಗಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವುದು ಬಹಳ ಹಳೆಯ ಬೇಡಿಕೆ. 2011ರ ಜನಗಣತಿ ಪ್ರಕಾರ ಪುಟ್ಟ ಜಿಲ್ಲೆ ಕೊಡಗಿನ ಜನಸಂಖ್ಯೆ 5.5 ಲP್ಷÀ. ಈ ಪ್ರಮಾಣ ಈಗ ಸುಮಾರು 8-9 ಲP್ಷÀ ತಲುಪಿರಬಹುದು. ಆದರೆ ಎಲ್ಲಾ ಬಗೆಯ ಆರೋಗ್ಯ ತೊಂದರೆಗಳಿಗೆ ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ಕೊಡುವ ಆಸ್ಪತ್ರೆ ಜಿಲ್ಲೆಯಲ್ಲಿ ಇಲ್ಲ. ಹೆಚ್ಚಿನ ಸಂದರ್ಭದಲ್ಲಿ ಇಲ್ಲಿ ಪ್ರಾಥಮಿಕ ಚಿಕಿತ್ಸೆ ಮಾತ್ರ ಸಿಗುತ್ತದೆ. ಕಷ್ಟಕರ ಹೆರಿಗೆಯಂಥ ಕಠಿಣ ಪರಿಸ್ಥಿತಿ, ತೀವ್ರ ಹÊದಯಾಘಾತ, ರಸ್ತೆ ಅಪಘಾತದಂತಹ ತುರ್ತು ಇರುವಾಗ ಹೆಚ್ಚಿನ ಚಿಕಿತ್ಸೆ ಬೇಕೆಂದರೆ ದೂರದ ಮೈಸೂರು, ಬೆಂಗಳೂರು ಅಥವಾ ಮಂಗಳೂರಿಗೆ ತೆರಳುವ ಅನಿವಾರ್ಯತೆ ಇಲ್ಲಿ ಈಗಲೂ ಇದೆ. ಇಂಥ ಸಂದರ್ಭದಲ್ಲಿ ಚಿಕಿತ್ಸೆಯಲ್ಲಾದ ವಿಳಂಬದಿAದ ಸಾವನ್ನಪ್ಪಿದವರ ದೊಡ್ಡ ಪಟ್ಟಿಯೇ ಕೊಡಗಿನಲ್ಲಿ ಸಿಗುತ್ತದೆ.
ಹಾಗಾಗಿ ಕೊಡಗಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ನಿಟ್ಟಿನಲ್ಲಿ 2010ರ ಜೂನ್‌ನಲ್ಲಿ ಕೊಡಗಿನಲ್ಲಿ ದೊಡ್ಡ ಮಟ್ಟದ ಆನ್‌ಲೈನ್ ಅಭಿಯಾನವೂ ನಡೆದಿತ್ತು. ದೇಶ ವಿದೇಶದಲ್ಲಿರುವ ಕೊಡಗು ಮೂಲದವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಸಿನಿಮಾ ನಟರು, ಕ್ರೀಡಾಪಟುಗಳೂ ಕೊಡಗಿನವರ ಬೇಡಿಕೆಗೆ ಒತ್ತಾಸೆಯಾಗಿ ನಿಂತಿದ್ದರು. ಫೇಸ್‌ಬುಕ್ ಮತ್ತು ಎಕ್ಸ್ನಲ್ಲಿ ಇದೊಂದು ದೊಡ್ಡ ಟ್ರೆಂಡ್ ಕೂಡ ಸÊಷ್ಟಿಸಿತ್ತು. ಈ ಬೆನ್ನಲ್ಲೇ ಮಡಿಕೇರಿಯಲ್ಲಿ ಇರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಒಂದೊAದಾಗಿ ಸವಲತ್ತುಗಳನ್ನು ಒದಗಿಸುತ್ತಾ ಬರಲಾಗುತ್ತಿದ್ದರೂ ತುರ್ತು ಸಂದರ್ಭಗಳಲ್ಲಿ ಹೊರ ಜಿಲ್ಲೆಯ ಆಸ್ಪತ್ರೆಗಳಿಗೆ ರೋಗಿಗಳಲ್ಲಿ ಕಳುಹಿಸುವುದು ಇನ್ನೂ ನಿಂತಿಲ್ಲ. ಇದಕ್ಕೆಲ್ಲಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೇ ಪರಿಹಾರ ಎನ್ನುವುದು ಸ್ಥಳೀಯರ ನಂಬಿಕೆ. ಈ ಹಿನ್ನೆಲೆಯಲ್ಲಿ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ಅಭಿಪ್ರಾಯ ಹಂಚಿಕೊAಡಿದ್ದಾರೆ.
ಮಡಿಕೇರಿಯಲ್ಲಿ ಈಗಾಗಲೇ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಆದರೂ ಮೈಸೂರು, ಮಂಗಳೂರು ಹಾಗೂ ಬೆಂಗಳೂರು ಆಸ್ಪತ್ರೆಗೆ ತೆರಳುವುದು ತಪ್ಪಲಿಲ್ಲ. ಇಲ್ಲೇ ಎಲ್ಲಾ ಅತ್ಯಾಧುನಿಕ ಸೌಲಭ್ಯ ಇರುವ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಸ್ಥಳೀಯ ರೋಗಿಗಳಿಗೆ ಅನುಕೂಲ ಆಗುತ್ತದೆ. ಕೊಡಗಿಗೆ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಖಂಡಿತವಾಗಿಯೂ ಬೇಕು.
ಚೈತ್ರಾ, ಸದಸ್ಯೆ, ಗ್ರಾಮ ಪಂಚಾಯತ್, ಹಂಡ್ಲಿ
ಕೊಡಗು ಪುಟ್ಟ ಜಿಲ್ಲೆ ಆದರೂ ಇಲ್ಲಿ ಆದಾಯ ಹೆಚ್ಚಿದೆ. ಇಲ್ಲಿ ದೊಡ್ಡದಾಗಿ ಆರೋಗ್ಯ ಸಮಸ್ಯೆ ಎದುರಾದರೆ ಜಿಲ್ಲೆಯಲ್ಲಿ ಒಂದು ಉತ್ತಮ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಅದುದರಿಂದ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಎದುರಾದರೆ ಹೊರ ಜಿಲ್ಲೆಯನ್ನು ಅವಲಂಬನೆ ಮಾಡಬೇಕಿದೆ. ಇಲ್ಲಿ ಸ್ಥಳವಕಾಶ ಇದ್ದರೂ ಈ ಹಿಂದೆಯೇ ಮಾಡಬೇಕಿತ್ತು. ಇಚ್ಛಾಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿದೆ. ಇನ್ನಾದರೂ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಲಿ.
ಎಸ್.ಎನ್. ಮೋಹನ್ ಕುಮಾರ್, ಪ್ರಾಂಶುಪಾಲ, ಭಾರತಿ ಪ್ರಥಮ ದರ್ಜೆ ಕಾಲೇಜು, ಶನಿವಾರಸಂತೆ
ಕೊಡಗು ಗುಡ್ಡಗಾಡು ಪ್ರದೇಶ. ವರ್ಷದಲ್ಲಿ ನಾಲ್ಕು ತಿಂಗಳು ಭಾರಿ, ಮಳೆ ಗಾಳಿ ಇರುತ್ತದೆ. ಅನಾಹುತವಾದರೆ ಜೀವ ಉಳಿಸಿಕೊಳ್ಳುವುದೇ ಕಷ್ಟ. ಹೃದಯಾಘಾತವಾದರೆ ನಗರಗಳಿಗೆ ತಲುಪುವುದರೊಳಗೆ ಜೀವ ಉಳಿದ ನಿದರ್ಶನಗಳು ಕಡಿಮೆ ಇದೆ. ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಬೇಕು.
ಉದಯ್, ಕೃಷಿಕ, ದೊಡ್ಡಮಳ್ತೆ ಗ್ರಾಮ
ಕೊಡಗು ಜಿಲ್ಲೆಯಲ್ಲಿ ಜನರ ಪ್ರಾಣ ಉಳಿಸಲು ಇನ್ನಾದರೂ ಸರ್ಕಾರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಪಣ ತೊಡಬೇಕಿದೆ. ಜಿಲ್ಲೆಯ ಜನ ತುರ್ತು ಚಿಕಿತ್ಸೆಗಾಗಿ ಪರ ಜಿಲ್ಲೆ, ಪರ ರಾಜ್ಯವನ್ನು ಅವಲಂಬಿಸಿರುವುದು ದುರಾದೃಷ್ಟಕರ. ಕೊಡಗು ಪುಟ್ಟ ಜಿಲ್ಲೆ. ಇಲ್ಲಿ ನಿವಾಸಿಗಳ ಬೇಡಿಕೆಗೆ ತುರ್ತು ಸ್ಪಂದನೆ ಬೇಕಿದೆ.
ಹರಿಪ್ರಸಾದ್, ತಟ್ಟಳ್ಳಿ ನಿವಾಸಿ
ಮಡಿಕೇರಿಯಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದು ಒಂದೆಡೆ ಜಿಲ್ಲೆಯ ಪ್ರಗತಿಯ ಸಂಕೇತವಾದರೆ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ವೈದ್ಯರು ಅನಿವಾರ್ಯ ಕಾರಣಗಳಿಂದ ಹೊರ ಜಿಲ್ಲೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿರುವುದು ಅನಿವಾರ್ಯ. ಜಿಲ್ಲೆಯಲ್ಲಿಯೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದ್ದಲ್ಲಿ ಸಕಲ ಸೌಲಭ್ಯಗಳು ಒದಗುವುದರಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೂ ಜಿಲ್ಲೆಯ ಹೆಚ್ಚಿನ ವೈದ್ಯರಿಗೂ ಒಂದೆಡೆ ಅವಕಾಶ ದೊರೆಯುತ್ತದೆ. ಹೊರ ಜಿಲ್ಲೆಗಳ ಅವಲಂಬನೆ ತಪ್ಪುತ್ತದೆ. ಇಲ್ಲಿಯ ರೋಗಿಗಳಿಗೂ ಉತ್ತಮ ಸೌಲಭ್ಯ ಸಿಕ್ಕಂತಾಗುತ್ತದೆ.
ಬಾಕಿಲನ ಮೈನಾ ಸಚಿನ್, ಬಲಮುರಿ
ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರು ಕೂಡ ಆರೋಗ್ಯ ವಿಚಾರದಲ್ಲಿ ಹಿಂದಿದ್ದೇವೆ. ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಮೊದಲಿನಿಂದಲೂ ಇದೆ. ತುರ್ತು ಪರಿಸ್ಥಿತಿಯಲ್ಲಿ ದೂರದ ಊರುಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದ್ದು, ಇದರಿಂದಾಗಿ ಹಲವಾರು ಜೀವಗಳು ನಷ್ಟವಾಗಿದೆ. ಜಿಲ್ಲೆಯಲ್ಲಿಯೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಇದ್ದರೆ ಜನತೆಗೆ ಒಳ್ಳೆಯದು. ಈ ನಿಟ್ಟಿನಲ್ಲಿ ಸಂಬAಧಿಸಿದವರು ಗಮನ ಹರಿಸಲಿ.
ಲತಾಶ್ರೀ ಸುಪ್ರೀತ್, ಉದ್ಯೋಗಿ, ಗೋಣಿಕೊಪ್ಪಲು
ಜಿಲ್ಲಾಸ್ಪತ್ರೆ ಬೋಧಕ ಆಸ್ಪತ್ರೆಯಾದರು ಸಹ ಇಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ದೊರಕುವುದು ಕಷ್ಟ ಸಾಧ್ಯವಾಗಿದೆ. ಒಂದು ಹಂತ ತನಕದ ಚಿಕಿತ್ಸೆಗಳು ಇಲ್ಲಿ ಲಭ್ಯವಾಗಿದ್ದು, ಮೂತ್ರ ಪಿಂಡ, ಶ್ವಾಸಕೋಶ, ಹೃದಯ ಸಂಬAಧಿ ಚಿಕಿತ್ಸೆ ಪಡೆಯಲು ಮೈಸೂರು, ಮಂಗಳೂರು, ಬೆಂಗಳೂರು ಎಂದು ಹೊರ ಜಿಲ್ಲೆಗಳಿಗೆ ಜೀವ ಉಳಿಸಿಕೊಳ್ಳಲು ಹೋಗಲೇಬೇಕಾದ ಅನಿವಾರ್ಯ ಜಿಲ್ಲೆಯ ನಿವಾಸಿಗಳದ್ದಾಗಿದೆ. ಸರ್ಕಾರ ಈ ಪುಟ್ಟ ಜಿಲ್ಲೆಯನ್ನು ಪರಿಗಣನೆಗೆ ತೆಗೆದುಕೊಂಡು ಜಿಲ್ಲೆಗೆ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನೀಡಬೇಕು. ಶಾಸಕದ್ವಯರು ಇದನ್ನು ಗಂಭೀರವಾಗಿ ಪರಿಗಣಿಸಬೇಕು.
ಮದನ್ ಮಾಚಯ್ಯ, ಐಮಂಗಲ, ವಿರಾಜಪೇಟೆ
ಖಂಡಿತವಾಗಿಯೂ ಕೊಡಗಿಗೆ ಒಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು. ಮಡಿಕೇರಿಯಲ್ಲಿ ಈಗಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇದ್ದರೂ ಸಮರ್ಪಕ ಸೇವೆ ಜಿಲ್ಲೆಯ ಜನತೆಗೆ ಸಿಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಮಡಿಕೇರಿಯಿಂದ ಬೇರೆ ಕಡೆಗೆ ಕಳುಹಿಸುತ್ತಾರೆ. ಈ ರೀತಿ ಆದಾಗ ಬಹುತೇಕ ಪ್ರಕರಣಗಳಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲೇ ಪ್ರಾಣ ಕಳೆದುಕೊಂಡವರು ಇದ್ದಾರೆ. ಸ್ಥಳೀಯವಾಗಿಯೇ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸವಲತ್ತು ಇದ್ದರೆ ಎಲ್ಲರಿಗೂ ಅನುಕೂಲ.
ಕೆ.ಬಿ. ಶಂಷುದ್ದೀನ್, ಗ್ರಾ.ಪಂ. ಸದಸ್ಯ, ಕೂಡುಮಂಗಳೂರು
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿಯೇ ಉನ್ನತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಎಂಆರ್‌ಐ ಸ್ಕಾö್ಯನಿಂಗ್ ವಿಭಾಗ ಸೇರಿದಂತೆ ಹಲವು ವಿಭಾಗಕ್ಕೆ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗಿದೆ. ಆ ನಿಟ್ಟಿನಲ್ಲಿ ಇಲ್ಲಿನ ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎನ್ನುವ ಸಂಕಲ್ಪ ಮಾಡಲಾಗಿದೆ. ಕಾರ್ಡಿಯಾಲಜಿ ವಿಭಾಗದಲ್ಲಿಯೂ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ. ಖಾಯಂ ವೈದ್ಯರ ನೇಮಕಕ್ಕೂ ಕ್ರಮ ತೆಗೆದದುಕೊಳ್ಳಲಾಗಿದೆ. ಸದನದಲ್ಲೂ ಈ ವಿಷಯ ಪ್ರಸ್ತಾಪ ಮಾಡಲಾಗಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ