* ತೆರಿಗೆ ಹೆಚ್ಚಿಸದೇ ಅಭಿವೃದ್ಧಿಗೆ ಉತ್ತು ನೀಡಿದ ಅಧ್ಯಕ್ಷೆ ಸುಂಕಮ್ಮ
* ಪೇಪರ್‌ಲೆಸ್ ಕಚೇರಿ, ಸ್ವಚ್ಛತೆ, ಮೂಲ ಸೌಕರ್ಯಕ್ಕೆ ಆದ್ಯತೆ
ಹೊಸಪೇಟೆ: ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಸೋಮವಾರ ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಎರಡನೇ ಬಾರಿಗೆ ನಗರಸಭೆ ಬಜೆಟ್ ಮಂಡಿಸಿದರು. ಸಾರ್ವಜನಿಕರಿಗೆ ಆಸ್ತಿ ತೆರಿಗೆ, ನೀರಿನ ಕರದ ಹೊರೆ ಹೊರಿಸದೇ, ನಗರಸಭೆ ಕಚೇರಿಯನ್ನು ಪೇಪರ್ ಮುಕ್ತಗಳೊಸುವುದು, ಸ್ವಚ್ಛತೆ, ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವ ಜತೆಗೆ ೨೦೨೩-೨೪ನೇ ಸಾಲಿಗೆ ೨.೪೦ ಕೋಟಿ ರೂ. ಉಳಿತಾಯದ ಬಜೆಟ್ ಮಂಡಿಸಿದರು.
ಸರ್ಕಾರದ ಅನುದಾನ ೪೨.೫೯ ಕೋಟಿ ರೂ., ನಗರಸಭೆ ನಿಧಿ ೨೮.೯೫ ಕೋಟಿ ರೂ., ಅಸಾಮಾನ್ಯ ಆದಾಯ ೮.೫೦ ಕೋಟಿ ರೂ. ನಿರೀಕ್ಷೆಯೊಂದಿಗೆ ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿ ೨ ಕೋಟಿ ರೂ., ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ೩೯.೪೦ ಲಕ್ಷ ರೂ., ಕುಡಿಯುವ ನೀರು ಪೂರೈಕೆಗೆ ಅಗತ್ಯವಿರುವ ರಸಾಯನಿಕ ದಾಸ್ತಾನು ಖರೀದಿಗೆ ೧ ಕೋಟಿ ರೂ., ನಗರ ಅರಣ್ಯೀಕರಣ, ನಗರ ಸೌಂದರ್ಯೋಕರಣ, ಉದ್ಯಾನಗಳ ಹೊರಗುತ್ತಿಗೆಗೆ ೭೦ ಲಕ್ಷ ರೂ., ವಿದ್ಯುತ್ ಶುಲ್ಕ ಪಾವತಿ ೫ ಲಕ್ಷ ರೂ. ವಿವಿಧ ವೃತ್ತ ಮತ್ತು ಆಟೋ ಶಲ್ಟರ್‌ಗಳ ಅಭಿವೃದ್ಧಿಗೆ ೫ ಲಕ್ಷ ರೂ., ೭ನೇ ವೇತನ ಆಯೋಗದ ಅಂತಿಮ ವರದಿ ಕಾಯ್ದಿರಿಸಿ, ಸರ್ಕಾರ ಶೇ.೧೭ ರಷ್ಟು ಮಧ್ಯಂತರ ಪರಿಹಾರಕ್ಕಾಗಿ ೩೦ ಲಕ್ಷ ರೂ. ಸೇರಿದಂತೆ ಮೂಲ ಸೌಕರ್ಯ, ಬೀದಿ ದೀಪ ನಿರ್ವಹಣೆ ಮತ್ತಿತರೆ ವೆಚ್ಚಗಳಿಗೆ ೭೭.೬೩ ಕೋಟಿ ರೂ. ತೆಗೆದಿಸಿದ್ದು, ೨.೪೦ ಕೋಟಿ ರೂ. ಉಳಿತಾಯದ ಬಜೆಟ್ ಪ್ರಸ್ತುತ ಪಡಿಸಿದರು.
ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರ ಸೂಚನೆ ಮೇರೆಗೆ ಉಪಾಧ್ಯಕ್ಷ ಆನಂದ ಎಲ್.ಎಸ್. ಆಯವ್ಯಯ ವಾಚಿಸಿದರು.
ನಗರಸಭೆ ಪೌರಾಯುಕ್ತ ಮನೋಹರ್, ಸದಸ್ಯರಾದ ಜಂಬುನಾಥ ತಾರಿಹಳ್ಳಿ, ಎನ್.ರೂಪೇಶ್ ಕುಮಾರ್, ಬಿ.ಜೀವರತ್ನಂ, ಕನಕಮ್ಮ, ಹುಲುಗಪ್ಪ ವಡ್ರು, ಖಾಜಾಬನ್ನಿ, ಎಂ.ಅಸ್ಲಾಮ್, ಸಂತೋಷ ಕುಮಾರ್, ಶೇಕ್ಷಾವಲಿ, ಎಚ್.ಕೆ.ಮಂಜುನಾಥ, ಲತಾ, ಲಕ್ಷ್ಮೀ, ಕೆ.ಗೌಸ್, ಎಚ್.ಶಂಕುಂತಲಾ, ಎ.ಲತಾ ಮತ್ತಿತರರು ಪಾಲ್ಗೊಂಡಿದ್ದರು.