ಜಿಲ್ಲೆ

ಚಿಕನ್ ಸೇವಿಸಿ ೩೦ ಕ್ಕೂ ಹೆಚ್ಚು ಹಾಸ್ಟೆಲದ ವಿದ್ಯಾರ್ಥಿನಿಯರು ಅಸ್ವಸ್ಥ

ಹೊಸಪೇಟೆ: ಕಲುಷಿತ ಆಹಾರ ಸೇವನೆಯಿಂದ ೩೦ ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ನಗರದಲ್ಲಿ ಗುರುವಾರ ಸಂಭವಿಸಿದೆ.

ನಗರದ ಸರ್ಕಾರಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ ಬಾಲಕಿಯರ ವಸತಿ  ನಿಲಯದಲ್ಲಿರುವ ೧೪೮ ವಿದ್ಯಾರ್ಥಿಗಳ ಪೈಕಿ ೩೦ ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ಅವರನ್ನು ನಗರದ ಉಪ ವಿಭಾಗ ಮಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಇನ್ನುಳಿದವರಿಗೆ ಹಾಸ್ಟೆಲ್ ನಲ್ಲೇ ಮಾತ್ರೆ, ಇಂಜಕ್ಷನ್ ನೀಡಿ ಉಪಚರಿಸಲಾಗಿದೆ. ಎಲ್ಲರ ಆರೋಗ್ಯ ಸ್ಥರವಾಗಿದೆ.

ಘಟನೆ ವಿವರ:

ಕಳೆದ ರಾತ್ರಿ ಹಾಸ್ಟೆಲ್ ನಲ್ಲಿ ಚಿಕ್ ಊಟ ಬಡಿಸಲಾಗಿತ್ತು. ಒಟ್ಟು ೧೪೮ ವಿದ್ಯಾರ್ಥಿನಿಯರಲ್ಲಿ ೧೭ ಜನರು ಸಸ್ಯಹಾರ ಸೇವಿಸಿದ್ದು, ಇನ್ನುಳಿದವರು ಮಾಂಸಹಾರ ಸೇವಿಸಿದ್ದರು.

ಚಿಕನ್ ಸೇವಿಸಿದವರಿಗೆ ಬೆಳಗಿನ ಜಾವ ೩ ಗಂಟೆ ಸುಮಾರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಆನಂತರ ವಾಂತಿ- ಬೇಧಿ ಕಾಣಿಸಿಕೊಂಡಿದೆ.‌ ತಕ್ಷಣ ವಿದ್ಯಾರ್ಥಿಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್., ಜಿ.ಪಂ.ಸಿಇಒ ಸದಾಶಿವ ಪ್ರಭು, ಎಸಿ ನೋಂಗ್ಜಾಯ್ ಅಕ್ರ‌ಮ್ ಅಲಿ ಶ ಆಸ್ಪತ್ರೆಗೆ ಭೇಟಿ, ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.