ಜಿಲ್ಲೆ

ಹಂಪಿ ಜೂಗೆ ಮತ್ತೊಂದು ಹುಲಿ ಆಗಮನ

ಮಂಜುನಾಥ

ಹೊಸಪೇಟೆ: ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಿಂದ ಕಲ್ಯಾಣ ಕರ್ನಾಟಕದಲ್ಲಿ ಸಫಾರಿ ಹೊಂದಿರುವ ಏಕೈಕ ಮೃಗಾಯಲ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ಗೆ ಗುರುವಾರ ರೇವಾ ಎಂಬ ಹೆಸರಿನ ಗಂಡು ಹುಲಿ ಆಗಮಿಸಿದೆ.

ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಿಂದ ಒಂದು ಗಂಡು ಹುಲಿ ಮತ್ತು ಒಂದು ಗಂಡು ನೀರು ಕುದುರೆಯನ್ನು ಪ್ರಾಣಿ ವಿನಿಯಮ ಕಾರ್ಯಕ್ರಮದಡಿ ಹಸ್ತಾಂಸತರಿಸಿಕೊಳ್ಳಲು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಸಿಕ್ಕಿದೆ. ಆದ್ದರಿಂದ ರೇವಾ ಎಂಬ ಗಂಡು ಹುಲಿಯನ್ನು ಗುರುವಾರ ಜೂಲಾಜಿಕಲ್ ಪಾರ್ಕ್ಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ನಾಲ್ಕು ಹುಲಿಗಳಿದ್ದು, ಇದನ್ನು ಸೇರಿ ಐದು ಹುಲಿಗಳಾದವು. ಮತ್ತು ಮುಂದಿನ ದಿನಗಳಲ್ಲಿ ಒಂದು ಗಂಡು ನೀರು ಕುದುರೆಯನ್ನು ಸ್ಥಳಾಂತರಿಸಿಕೊAಡು ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಎಂದು ಜೂ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿಗೆ ದೇವಿ ಎಂಬ ಹೆಣ್ಣು ಹುಲಿ ವಯೋಜಹಾಜ ಕಾಯಿಲೆಯಿಂದ ಸತ್ತುಹೋಗಿತ್ತು. 9 ತಿಂಗಳ ಹಿಂದೆ ನೀರು ಕುದುರೆ ಕೂಡ ಸತ್ತು ಹೋಗಿತ್ತು. ಆದ್ದರಿಂದ ಇವುಗಳ ಜಾಗಕ್ಕೆ ಪ್ರಾಣಿಗಳನ್ನು ಒದಗಿಸಲು ಮೃಗಾಲಯ ಯೋಜನೆ ರೂಪಿಸಿದೆ. ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ ಹಾಗೂ ಹಂಪಿ ಮೃಗಾಲಯ ಮತ್ತು ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಸೇರಿ ಹೀಗೆ ಹತ್ತಾರು ಪ್ರವಾಸಿ ತಾಣಗಳು ಸಮೀಪದಲ್ಲಿ ಇವೆ. ದಿನೇ ದಿನೆ ವೀಕ್ಷಕರನ್ನು ಸೆಳೆಯುತ್ತಿರುವ ಹಂಪಿ ಜೂನಲ್ಲಿ ದೈತ್ಯದೇಹಿ ನೀರಾನೆ, ಸಿಂಹ, ಹುಲಿ, ಜಿರಾಫೆ, ಚಿರತೆ, ತೋಳಗಳು, ಕತ್ತೆ ಕಿರುಬಗಳು, ಬಬೂನ್‌ಗಳು ಸೇರಿ ನಾನಾ ಪಕ್ಷಿಗಳು, ಸರೀಸೃಪಗಳು ಉದ್ಯಾನದ ಪ್ರಮುಖ ಆಕರ್ಷಣೆಯಾಗಿವೆ.

ಮೃಗಾಲಯಕ್ಕೆ ಭೇಟಿ ನೀಡುವ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಹೊಸ ಪ್ರಾಣಿಗಳನ್ನು ತರುವುದು ಮತ್ತು ಜೂ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನೀರು ಕುದುರೆ ಕೆಲ ದಿನಗಳಲ್ಲಿ ಜೂಗೆ ಬರಲಿದೆ. ಕೆಲ ದಿನಗಳ ಹಿಂದೆ ಕೆಲ ಪ್ರಾಣಿಗಳು ಸತ್ತು ಹೋಗಿದ್ದವು. ಅವುಗಳ ಜಾಗಕ್ಕೆ ಪ್ರಾಣಿಗಳನ್ನು ತರಬೇಕಿದೆ. - ಡಾ.ರಾಜೇಶ್ ನಾಯ್ಕ, ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿ ಕಾರಿ, ಹಂಪಿ ಜೂ, ಕಮಲಾಪುರ