ಜಿಲ್ಲೆ

ನೀರುಪಾಲಾಗಿದ್ದ ಯುವಕ ಶವವಾಗಿ ಪತ್ತೆ

ಮಂಜುನಾಥ

ಹೊಸಪೇಟೆ: ನಗರದ ಚಿತ್ತವಾಡಗಿ ಸಮೀಪದ ತುಂಗಭದ್ರಾ ಎಲ್‌ಎಲ್‌ಸಿ ಕಾಲುವೆಯಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರಿನ ಸಳೆತಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

ನಗರದ ವಿನೋಬಾ ಭಾವೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಎ.ಎಂ.ಪಿ.ಶುಭಾ ಅವರ ಮಗ ಶಂಕರ್ (17) ಸಾವನ್ನಪ್ಪಿರುವ ಯುವಕ. ಶನಿವಾರ ಬೆಳಗ್ಗೆ ಸಂಬAಧಿಕರೊAದಿಗೆ ಈಜಲು ತೆರಳಿ ನೀರು ಪಾಲಾಗಿದ್ದ. ದಿನವಿಡೀ ಹುಡುಕಾಡಿದರೂ, ಪತ್ತೆಯಾಗಿರಲಿಲ್ಲ. ಭಾನುವಾರ ಎಚ್‌ಪಿಸಿ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.