filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:8; brp_del_th:0.1019,0.0012; brp_del_sen:0.1300,0.1300; motionR: 0; delta:1; bokeh:1; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 185.28069;aec_lux_index: 0;albedo: ;confidence: ;motionLevel: -1;weatherinfo: null;temperature: 38; 
ಜಿಲ್ಲೆ

ಉದ್ಯೋಗ ಮೇಳದಲ್ಲಿ ಜನಸಾಗರ

ಹೊಸಪೇಟೆ: ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ವಿಜಯನಗರ ವಾಣಿಜ್ಯ ಮತ್ತು ಕೈಗಾರಿಕೆ, ರೈಟ್‌ವೇಸೇಲ್ಯೂಷನ್ಸ್ ಸಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಜಿಲ್ಲೆ ಸೇರಿದಂತೆ ಬಳ್ಳಾರಿ, ಕೊಪ್ಪಳ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ವಿವಿಧ ಕಡೆಯ ಯುವಕ–ಯುವತಿಯರೂ ಸ್ವವಿವರದ ಪತ್ರ ಹಿಡಿದು ಉದ್ಯೋಗ ಮೇಳದತ್ತ ದೌಡಾಯಿಸಿದ್ದರು. ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿವರೆಗೆ ವಿದ್ಯಾಭ್ಯಾಸ ಪೂರೈಸಿದವರಿಗೆ ಒಂದೇ ಸೂರಿನಡಿ ವಿವಿಧ ಉದ್ಯೋಗಗಳ ಅವಕಾಶಗಳಿದ್ದವು. ಎಸ್‌ಎಸ್‌ಎಲ್‌ಸಿಗಿಂತ ಕಡಿಮೆ ಓದಿದವರಿಗೂ ಉದ್ಯೋಗಾವಕಾಶವಿತ್ತು. ಡಿಪ್ಲೊಮಾ, ಐಟಿಐ, ಬಿಇ, ಎಂಬಿಎ, ಬಿಕಾಂ, ಬಿಎ, ಬಿಎಸ್‌ಸಿ, ಎಂಎಸ್‌ಸಿ, ಎಂಎ ಸೇರಿದಂತೆ ವಿವಿಧ ವಿದ್ಯಾರ್ಹತೆಯುಳ್ಳವರು ಮೇಳದಲ್ಲಿದ್ದ ಕಂಪನಿಗಳ ಮಳಿಗೆಗಳಲ್ಲಿ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು.

ಮೇಳದಲ್ಲಿ ಒಟ್ಟು 52 ಕಾರ್ಪೊರೇಟ್ ಕಂಪನಿಗಳು ಭಾಗವಹಿಸಿದ್ದು, 4500ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. 1,400ಕ್ಕೂ ಜನರ ಅಂತಿಮ ಆಯ್ಕೆ ಪಟ್ಟಿ ತಯಾರಿಸಲಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಶ್ವಿನ್ ಕೊತಂಬರಿ ಮಾಹಿತಿ ನೀಡಿದರು.