ಜಿಲ್ಲೆ

ಪಂಚಕೋಶಗಳ ಧ್ಯಾನದಿಂದ ಮನಸ್ಸು ನಿರಾಳ

ಮಂಜುನಾಥ

ಹೊಸಪೇಟೆ: ಯೋಗ, ಧ್ಯಾನದಿಂದ ಮನಸ್ಸು ನಿರಾಳವಾಗುತ್ತದೆ. ಮನಸ್ಸಿನ ನಿರಾಳತೆಯೇ ಉತ್ತಮ ಆರೋಗ್ಯದ ಅಡಿಪಾಯ ಎಂದು ಪತಂಜಲಿ ಯೋಗ ಸಮಿತಿಯ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಹೇಳಿದರು.

ಪತಂಜಲಿ ಯೋಗ ಸಮಿತಿಯಿಂದ ನಗರದ ನೆಹರು ಕಾಲೋನಿಯ ಉದ್ಯಾನವನದಲ್ಲಿ ಭಾನುವಾರ ಬೆಳಿಗ್ಗೆ ನಡೆದ ವಿಶೇಷ ಯೋಗ ಶಿಬಿರದಲ್ಲಿ ಮಾತನಾಡಿದರು.

ನಮ್ಮ ದೇಹದಲ್ಲಿ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳೆಂಬ ಐದು ಕೋಶಗಳಿವೆ. ಇವುಗಳಿಗೆ ಶಕ್ತಿ ನೀಡುವಂತಹ ಕ್ರಿಯೆಯೇ ಧ್ಯಾನ. ಒಂದೊAದು ಕೋಶಕ್ಕೂ ಒಂದೊAದು ಬಗೆಯಲ್ಲಿ ಧ್ಯಾನ ಮಾಡುವ ವ್ಯವಸ್ಥೆ ಇದೆ. ಇದನ್ನು ರೂಢಿಸಿಕೊಳ್ಳುವುದು ಕಷ್ಟವೇನಲ್ಲ ಎಂದರು.

ಈಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗುತ್ತಿದೆ. ಮಕ್ಕಳು, ಯುವ ಸಮುದಾಯದಲ್ಲೇ ಈ ಘಟನೆ ಹೆಚ್ಚಾಗುತ್ತಿದೆ. ಉತ್ತಮ ಜೀವನ ಕ್ರಮವನ್ನು ಮಕ್ಕಳ ಹಂತದಲ್ಲೇ ರೂಢಿಸಿಕೊಳ್ಳಬೇಕು. ಪ್ರತಿನಿತ್ಯ ಯೋಗ ಮಾಡುವುದರಿಂದ ಹೃದಯಾಘಾತಗಳಂತಹ ಆಕಸ್ಮಿಕ ಸಾವನ್ನು ತಪ್ಪಿಸಲು ಸಾಧ್ಯ ಎಂದರು.

ಉದ್ಯಾಮಿ ನರೇಂದ್ರಕುಮಾರ್ ಬಲ್ಡೋಟಾ, ಪತಂಜಲಿ ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್ ಕುಮಾರ, ಯೋಗ ಸಾಧಕರಾದ ಉಮಾ ವಿಶ್ವನಾಥ್, ಮಂಗಳಮ್ಮ, ಕಟ್ಟಾ ನಂಜಪ್ಪ, ಸತ್ಯಪ್ಪ, ಶಿವಮೂರ್ತಿ, ಶ್ರೀರಾಮ, ಅನಂತ ಜೋಷಿ, ವಿಠೋಬಣ್ಣ, ಶ್ರೀಧರ, ಶ್ರೀನಿವಾಸ ಮಂಚಿಕಟ್ಟಿ ಇತರರಿದ್ದರು.