ಹೊಸಪೇಟೆ: ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಾರ್ಯಾಗಾರ ಘಟಕಗಳಲ್ಲಿ ಆಟೋ ಎಲೆಕ್ಟಷಿಯನ್, ಡಿಸಲ್ ಮೆಕ್ಯಾನಿಕ್, ಆಟೋ ವೆಲ್ಡರ್, ಆಟೋ ಬಾಡಿ ಬಿಲ್ಡರ್, ಶೀಟ್ ಮೆಟಲ್ ವರ್ಕ್ಸ್ (ಎಂ.ಎ.ವಿ) ವೃತ್ತಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಶಿಶಿಕ್ಷು ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ಕಚೇರಿಗೆ ಆ.23ರಂದು ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.