ಹೊಸಪೇಟೆ: ವಿವಿಧಬೇಡಿಕೆಈಡೇರಿಕೆಗೆ ಒತ್ತಾಯಿಸಿ ಎಐಯುಟಿಯುಸಿ ನೇತರತ್ವದಲ್ಲಿಕರ್ನಾಟಕರಾಜ್ಯ ಸಂಯುಕ್ತ ವಸತಿ ನಿಲಯಕಾರ್ಮಿಕರ ಸಂಘದಿAದ ನಗರದಲ್ಲಿಜಿಲ್ಲಾಧಿಕಾರಿಕವಿತಾಎಸ್.ಮನ್ನಿಕೇರಿಗೆ ಮನವಿ ಸಲ್ಲಿಸಿದರು.
ಕಾರ್ಮಿಕರ ಸಂಘದಜಿಲ್ಲಾಧ್ಯಕ್ಷಡಾ.ಪ್ರಮೋದ್ ಮಾತನಾಡಿ, ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರಿ, ಅನ್ಯಾಯವೆಸಗುವಗುತ್ತಿಗೆದಾರರಿಂದ ಮುಕ್ತಿಗೊಳಿಸಬೇಕು. ಕೆಲ ಜಿಲ್ಲೆಗಳಲ್ಲಿ 2025ರ ಜನವರಿಯಿಂದಲೇಸಹಕಾರ ಸಂಘ ರಚಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.ಸಾವಿರಾರು ಸಂಖ್ಯೆಯಲ್ಲಿಕಾರ್ಮಿಕರುಸಾವಿರರೂ.ಪಾವತಿಸಿ, ಸದಸ್ಯರಾಗಿಆಗಿದ್ದಾರೆ.ಆದರೆ, ವಿಜಯನಗರದಲ್ಲಿಸಹಕಾರ ಸಂಘ ರಚಿಸುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆಎಂದು ಆಗ್ರಹಿಸಿದರು.
ಹೊರಗುತ್ತಿಗೆ ರದ್ದುಗೊಳಿಸಿ, ಖಾಯಂ ನೇಮಕಾತಿ ಮಾಡಿಕೊಳ್ಳಬೇಕು. ಈಗಾಗಲೇ ನಿರ್ಧರಿಸಿದಂತೆ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ರಚನೆ ಮಡಬೇಕು.ಕನಿಷ್ಠ ವೇತನ ಹೆಚ್ಚಳದ ಅಧಿಸೂಚನೆಜಾರಿಯಾಗಬೇಕು.ಇಎಸ್‌ಐಆಸ್ಪತ್ರೆ ಸ್ಥಾಪನೆಯಾಗಲಿ ಎಂದು ಒತ್ತಾಯಿಸಿದರು.
ಜಿಲ್ಲಾಸಂಚಾಲಕ ಅಜ್ಜಯ್ಯ ಮಾತನಾಡಿ, ಹೈಕೋರ್ಟಆದೇಶದಂತೆ, ಗುತ್ತಿಗೆಕಾರ್ಮಿಕರಿಗೆ 21 ಸಾವಿರರೂ.ಕನಿಷ್ಠ ವೇತನಜಾರಿ ಮಾಡಿಅಧಿಸೂಚನೆರಾಜ್ಯ ಸರ್ಕಾರ ಹೊರಡಿಸಿತ್ತು.ಈಗಾಗಲೇ ಕಾರ್ಮಿಕಸಂಘಗಳು, ಮಾಲೀಕರು ಹಾಗೂ ಸರ್ಕಾರವನ್ನೊಳಗೊಂಡ ತ್ರಿಪಕ್ಷೀಯ ಸಭೆ ಮೂರು ಬಾರಿನಡೆದಿದೆ.ಆದರೆ, ಕಾರ್ಮಿಕರ ಹಿತದೃಷ್ಟಿಯಿಂದ ಈ ಸಭೆಗಳು ಫಲಪ್ರದವಾಗಿಲ್ಲ.ಈ ವಿಷಯದಲ್ಲೂಕೂಡಾರಾಜ್ಯ ಸರ್ಕಾರಕಾರ್ಮಿಕರ ಪರ ಸ್ಪಷ್ಟ ಹಾಗೂ ದೃಢ ನಿಲುವು ತೆಗೆದುಕೊಳ್ಳಬೇಕು.ಅಧಿಸೂಚನೆಯು ಸರ್ಕಾರಿಆದೇಶವಾಗಬೇಕಿದೆ.ಆಗ ಮಾತ್ರವೇಕಾರ್ಮಿಕರ ಶ್ರಮವನ್ನುದೋಚಿಕೋಟ್ಯಾಂತರರೂಪಾಯಿ ಲಾಭಗಳಿಸುವ ಮಾಲೀಕರ ಶೋಷಣೆಯಿಂದಕಾರ್ಮಿಕರಿಗೆ ಮುಕ್ತಿ ದೊರಕುವುದುಎಂದರು.