ಹೊಸಪೇಟೆ: ಸಕ್ಕರೆ ಕಾರ್ಖಾನೆ ನಿರ್ಮಾಣ ಆಗಬೇಕು ಹಾಗೂ ವಿಜಯನಗರ ಕಾಲೂವೆಗಳ ಕಳಪೆ ಕಾಮಗಾರಿ ನಡೆದಿದೆ ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿAದ ನಗರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ರವಾನಿಸಲಾಯಿತು.
2004ರಲ್ಲಿ ರಾಯಬಸವ ಹಾಗೂ ಕಾಳಘಟ್ಟ ಕೆನಾಲ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಮತ್ತು ನೀರು ಬಳಕೆದಾರರ ಸಹಕಾರ ಸಂಘ (ಮಡಿಗಳು) ಸಂಘದವರು ಈ ಕಾಮಗಾರಿಯನ್ನು ಮಾಡಿದ್ದು, ಪೂರ್ಣ ಮಾಡದೇ ಬಿಲ್‌ಗಳನ್ನು ಸಹ ಪಡೆದಿದ್ದಾರೆ. ಇನ್ನೂ ಅರ್ದದಷ್ಟು ನಡೆದ ಕಾಮಗಾರಿ ಕೂಡ ಕಳಪೆ ಕಾಮಗಾರಿಯಾಗಿದೆ. ಗುತ್ತಿಗೆದಾರ ಹಾಗೂ ಸಂಭAಧಿಸಿದವರ ವಿರುದ್ಧ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ನಿಂತಿರುವ ಕಾಮಗಾರಿ ಪೂರ್ತಿಗೊಳಿಸಬೇಕು. ಪುನಃ ರೈತರ ಗದ್ದೆಗಳಿಗೆ ಹರಿಸುವ ಮಡಿಗಳನ್ನು ಸೂಕ್ತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಈ ಭಾಗದ ಪ್ರಮುಖ ಬೇಡಿಕೆಯಾದ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಾಗಿ ಆಶ್ವಾಸಿನೆ ನೀಡಿದ ರಾಜ್ಯ ಸರ್ಕಾರ ತಮ್ಮ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ, ಪ್ರಮುಖರಾದ ಎಚ್.ನಾಗರಾಜ, ಜಿ.ಮೆಹಬೂಬ್ ಸಾಬ್, ಗಂಟೆ ಸೋಮಶೇಖರ, ಮನ್ಸೂರ್ ಭಾಷಾ, ಹರಟೆ ಕಾಳಪ್ಪ, ಹುಸೇನ್ ಸಾಬ್, ಕರೀಂ ಸಾಬ್, ತಳವಾರ್ ಹುಲುಗಪ್ಪ, ಎಚ್.ಮಾಬುಸಾಬ್, ದೇವಲಾಪುರ ಯಮನೂರ, ಖಾಜಾಸಾಬ್, ಕೆ.ಫಕುರ್ ಸಾಬ್, ಇಮಾಮ್ ಸಾಬ್ ಇತರರಿದ್ದರು.