ಹೊಸಪೇಟೆ: ನಗರದ ಕೃಷಿ ಮಾರುಕಟ್ಟೆಯಿಂದ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ ಮೂಲಕ ಡಾ.ಪುನೀತ್‌ರಾಜ್‌ಕುಮಾರ್ ವೃತ್ತದ ವರೆಗೆ ಸಂಪೂರ್ಣರಸ್ತೆಅಭಿವೃದ್ದಿಗೆ ಈಗಾಗಲೇ ಅಂದಾಜು ಪಟ್ಟಿತಯಾರಿಸಲಾಗಿದೆಎಂದು ಶಾಸಕ ಎಚ್.ಆರ್.ಗವಿಯಪ್ಪ ಹೇಳಿದರು.
ನಗರದ ವಾಸವಿ ಕಲ್ಯಾಣ ಮಂಟಪದರಸ್ತೆಕಾಮಗಾರಿಗೆ ಶನಿವಾರ ಚಾಲನೆ ನೀಡಿದ ನಂತರ ಶ್ರೀ ವಾಸವಿ ಕನ್ನಿಕಾಪರಮೇಶ್ವರಿದೇಗುಲದಲ್ಲಿ ಶನಿವಾರ ಮಾತನಾಡಿದರು.
ಎಪಿಎಂಸಿಯಿAದ ಪುನೀತ್‌ರಾಜ್‌ಕುಮಾರ್ ವೃತ್ತದ ವರೆಗಿನರಸ್ತೆಆಧುನೀಕರಣಕ್ಕೆಅಂದಾಜು ಪಟ್ಟಿ ಸಿದ್ದಗೊಂಡಿದ್ದು.ರಸ್ತೆಆಧುನೀಕರಣಜತೆಗೆ 400 ಕಾರುಗಳು ಹಾಗೂ 750 ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವಯೋಜನೆಇದೆ. ಕೆಲ ಕಾರಣಾಂತರಗಳಿAದ ಈ ಕಾಮಗಾರಿ ವಿಳಂಭವಾಗಿತ್ತು.ಸದ್ಯದಲ್ಲಿಯೇಕಾಮಗಾರಿಗೆ ಚಾಲನೆ ನೀಡಲಾಗುವುದುಎಂದರು.
ನಗರದ ಮೂಲ ಸೌಕರ್ಯಅಭಿವೃದ್ದಿಗೆ 10 ಕೋಟಿ ಸೇರಿದಂತೆ ಸರ್ಕಾರದಿಂದ 25 ಕೋಟಿರೂಅನುದಾನ ಬಿಡುಗಡೆಯಾಗಿದೆ.ಈ ಅನುದಾನದಲ್ಲಿ ನಗರ ಸೇರಿದಂತೆಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ದಿ ಕೈಗೊಳ್ಳಲಾಗಿದೆ.ಇದರಜತೆಗೆ ನಗರದ ನೆಹರೂಕಾಲೋನಿಯಲ್ಲಿರುವಕ್ರೀಡಾಂಗಣ, ಬಳ್ಳಾರಿ ರಸ್ತೆಯಲ್ಲಿ ಸರ್ಧಾರ್‌ಪಟೇಲ್ ಹೈಸ್ಕೂಲ್‌ಕ್ರೀಡಾಂಗಣ, ಮುನ್ಸಿಪಲ್ ಹೈಸ್ಕೂಲ್ ಕ್ರೀಡಾಂಗಣಗಳನ್ನು ಅಭಿವೃದ್ದಿ ಪಡಿಸಲುಚಿಂತನೆ ನಡೆಸಲಾಗಿದೆಎಂದರು.
ನಗರಸಭೆಅಧ್ಯಕ್ಷರೂಪೇಶ್‌ಕುಮಾರ್ ಮಾತನಾಡಿ, ನಗರದ ಮೂಲ ಸೌಕರ್ಯಗಳ ಅಭಿವೃದ್ದಿಗೆ ಪೌರಾಡಳಿತ ಇಲಾಖೆಯಿಂದ 10 ಕೋಟಿ ಬಿಡುಗಡೆಆಗಿದೆ.ಇನ್ನು ಹೆಚ್ಚಿನಅನುದಾನಕ್ಕೆ ಶಾಸಕರು, ಸರ್ಕಾರದ ಮೇಲೆ ಒತ್ತಡತರಬೇಕು.ನಗರದಅಭಿವೃದ್ದಿಗೆ ಶಾಸಕರಿಗೆ ನಮ್ಮ ಸಹಕಾರ ಸದಾಇರುತ್ತದೆಎಂದರು.
ಜಿಲ್ಲನಗರಾಭಿವೃದ್ಧಿಕೋಶದಯೋಜನಾ ನಿರ್ದೇಶಕ ಮನೋಹರ್, ನಗರಸಭೆಅಧ್ಯಕ್ಷರೂಪೇಶ್‌ಕುಮಾರ್, ಪೌರಾಯುಕ್ತಎರಗುಡಿ ಶಿವಕುಮಾರ್, ಎಇ ಮನ್ಸೂರುಅಹಮದ್, ಉಪಾಧ್ಯಕ್ಷರಮೇಶ್ ಗುಪ್ತ, ಸದಸ್ಯರಾದ ತಾರಿಹಳ್ಳಿ ಜಂಬುನಾಥ,ಮAಜುನಾಥ, ಅಬ್ದುಲ್‌ಖದೀರ್,ವಾಸವಿ ಸಮಾಜದಅಧ್ಯಕ್ಷ ಕಾಕುಬಾಳು ರಾಜೇಂದ್ರ,ಕಾರ್ಯದರ್ಶಿ ಭೂಪಾಳ್ ಪ್ರಹ್ಲಾದ್‌ಇತರರಿದ್ದರು.