ಹೊಸಪೇಟೆ: ವಾರ್ಡ್ಗಳಲ್ಲಿನ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ನಗರದಲ್ಲಿ ಶಾಸಕ ಎಚ್.ಆರ್.ಗವಿಯಪ್ಪಗೆ ಬುಧವಾರ ಮನವಿ ಸಲ್ಲಿಸಿದರು.
ನಗರದ 33, 34, 35ನೇ ವಾರ್ಡಗಳಲ್ಲಿ ಹೆಚ್ಚಾಗಿ ಬಡವರೇ ವಾಸವಿದ್ದಾರೆ. ಇಲ್ಲಿ ಮಾನಸಿಕವಾಗಿ ಹಲವು ಕೊರತೆಗಳು ಬಾಧಿಸುತ್ತಿವೆ. ನಿವೇಶನ ಸಮಸ್ಯೆ, ಸ್ಲಂ ಬೋರ್ಡ್ ಮನೆಗಳಿಗೆ ಬಿಲ್ ಪಾವತಿಯಾಗುತ್ತಿಲ್ಲ. ವಿದ್ಯುತ್ ಅಡಚಣೆ ಸೇರಿದಂತೆ ವಿವಿಧ ಕುಂದು ಕೊರತೆಗಳು ಆಲಿಸುವವರೆ ಇಲ್ಲದಂತಾಗಿದೆ. ವಾರ್ಡ್ಗಳಲ್ಲಿ ಕ್ರಿಮಿನಾಶಕ ಮತ್ತು ಫಾಗಿನ್ ಸಿಂಪಡಿಸದೇ ಸೊಳ್ಳೆಗಳಿಂದ ಬರುವ ಕಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ. ಕುಡಿವ ನೀರಿನ ಸಮಸ್ಯೆ ಮಿತಿ ಮೀರುತ್ತಿದೆ. ನಗರದಲ್ಲಿ ಮನೆ ಬಾಡಿಗೆ, ಅಗತ್ಯ ವಸ್ತುಗಳ ಬೆಲೆಗಳು ದುಬಾರಿಯಾಗಿವೆ. ಇವುಗಳಿಂದ ಬಡವರು ಕಂಗಾಲಾಗಿದ್ದಾರೆ ಎಂದು ಆಗ್ರಹಿಸಿದರು.
ನಿವೇಶನ ರಹಿತರ ಪಟ್ಟಿ ತಯಾರಿಸಿ ನಿವೇಶನ ನೀಡಬೇಕು. ವಿದ್ಯುತ್ ಅಡಚಣೆ ಮುಂಜಾಗೃತಾ ಮಾಹಿತಿ ನೀಡದೇ ಮನಸೊಇಚ್ಛೇ ವಿದ್ಯುತ್ ತೆಗೆಯ ಬಾರದು. ಮಳೆಗಾಲ ಆರಂಭವಾಗಿರುವುದರಿAದ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತ ಕ್ರಮವಹಿಸಬೇಕು. ದೇವದಾಸಿ ಮಹಿಳೆಯರಿಗೆ ಜೀವನ ನಡೆಸಲು 5 ಎಕರೆ ಜಮೀನು ಮತ್ತು ಪ್ರತೀ ತಿಂಗಳೂ ಪಿಂಚಣಿ ನೀಡಬೇಕು. ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕರಲ್ಲದವರು ಸರ್ಕಾರಿ ಸೌಲಭ್ಯ ಪಡೆಯುದನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಯಲ್ಲಲಿಂಗ, ಭಾಸ್ಕರ್‌ರೆಡ್ಡಿ, ಈಡಿಗರ ಮಂಜುನಾಥ, ವಿ.ಸ್ವಾಮಿ ಇತರರಿದ್ದರು.