ಹೊಸಪೇಟೆಯಲ್ಲಿ ರಾಜ್ಯ ವಕ್ಫ್ ಮಂಡಳಿ ಮುಚ್ಚುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಬುಧವಾರ ಮನವಿ ಸಲ್ಲಿಸಲಾಯಿತು.  
ಜಿಲ್ಲೆ

ರೈತ ವಿರೋಧಿ ವಕ್ಫ್ ಮಂಡಳಿ ಮುಚ್ಚಿ

ಮಂಜುನಾಥ

ಹೊಸಪೇಟೆ: ರೈತರ ಜಮೀನು ಕಬಳಿಸುತ್ತಿರುವ ವಕ್ಫ್ ಮಂಡಳಿ ಮುಚ್ಚುವಂತೆ ಒತ್ತಾಯಿಸಿ ಕರ್ನಾಟಕ ನವನಿರ್ಮಾಣ ಸೇನೆ ಪದಾಧಿಕಾರಿಗಳು ನಗರದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರಗೆ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲಾಧಾಧ್ಯಕ್ಷ ಪಾಟೀಲ್ ಕಲ್ಲೇಶ್ ಮಾತನಾಡಿ, ನಾಡಿನ ರೈತರ ಜಮೀನು, ಶಾಲೆ, ಮಠಗಳು, ದೇವಸ್ಥಾನ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ರಾಜ್ಯ ವಕ್ಫ್ ಮಂಡಳಿ ನೋಟಿಸ್ ನೀಡಿ ಸಾವಿರಾರು ಎಕರೆ ಜಮೀನು ಕಬಳಿಸುತ್ತಿದೆ. ತಲೆ ತಲಾಂತರುಗಳಿAದ ಪಿತ್ರಾರ್ಜಿತ ಆಸ್ತಿಯಲ್ಲಿ ಉಳುವೆ ಮಾಡುತ್ತಿರುವ ರೈತ ಜಮೀನಿನ ಪಹಣಿಯಲ್ಲಿ ಏಕಾಏಕಿ ವಕ್ಫ್ ಬೋರ್ಡ ಮಾಲಿಕತ್ವ ಎಂದು ದಾಖಲಾಗುತ್ತಿರುವುದು ಆಶ್ಚರ್ಯವಾಗಿದೆ. ರಾಜ್ಯ ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ಈ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಮತ ಬ್ಯಾಂಕ್ ರಾಜಕಾರಣಕ್ಕೆ ನಾಡಿನ ವಕ್ಫ್ ಸವಾರಿ ಮಾಡಿಸಲು ಮುಂದಾಗಿರುವ ರಾಜಕಾರಣಿಗಳ ನೀಚ ಮನಸ್ಥಿಗೆ ನಮ್ಮ ಧಿಕ್ಕಾರವಿರಲಿ ಎಂದು ಆಗ್ರಹಿಸಿದರು.

ರಾಜ್ಯ ವಕ್ಫ್ ಮಂಡಳಿಯಿAದ ರಾಜ್ಯದಲ್ಲಿ ಹಲವು ವರ್ಷಗಳಿಂದ ಈ ಹಗಲು ದರೋಡೆ ನಡೆಯುತ್ತಿದೆ. ಲಗಾಮು ಇಲ್ಲದ ಕುದುರೆಯಂತೆ ಓಡುತ್ತಿರುವ ಈ ಕುದುರೆಗೆ ಕಟ್ಟಿ ಹಾಕಿ ನುಂಗಿರುವ ಜಮೀನು ಮರಳಿ ಪಡೆಯುವ ಕೆಲಸ ಸರ್ಕಾರ ಮಾಡ ಬೇಕು. ರಾಜ್ಯ ವಕ್ಫ್ ಮಂಡಳಿಯನ್ನು ಶಾಶ್ವತವಾಗಿ ರಾಜ್ಯ ಸರ್ಕಾರ ಮುಚ್ಚಬೇಕು. ಈ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಸರ್ಕಾರ ಒಂದು ವೇಳೆ ವಕ್ಫ್ ಬೋರ್ಡ ಮುಚ್ಚದಿದ್ದರೆ ಕರ್ನಾಟಕ ನವನಿರ್ಮಾಣ ಸೇನೆಯಿಂದ ವಕ್ಫ್ ಬೋರ್ಡಗೆ ಮುತ್ತಿಗೆ ಹಾಕಿ ಬೀಗ ಹಾಕಿ ಮುಚ್ಚಲಿದೆ ಎಂದು ಎನ್ನುವ ಎಚ್ಚರಿಕೆ ನೀಡಿದರು.

ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧಾಧ್ಯಕ್ಷ ಪಾಟೀಲ್ ಕಲ್ಲೇಶ್, ಪ್ರಮುಖರಾದ ಬಿ.ಎಸ್.ವಿಶ್ವನಾಥ್, ಕೆ.ಎಸ್.ಹರೀಶ್, ಚಂದ್ರಶೇಖರ್, ಜಂಬೂರ್ ಇತರರಿದ್ದರು.