ಜಿಲ್ಲೆ

ಕರಡು ಮತದಾರರ ಅಂತಿಮ ಪಟ್ಟಿ ಬಿಡುಗಡೆ

ಮಂಜುನಾಥ

ಹೊಸಪೇಟೆ: ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿ ಪರಿಷ್ಕರಣೆ ನಂತರ ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಬಿಡುಗಡೆಗೊಳಿಸಿ ಮುದ್ರಣ ಪ್ರತಿಯನ್ನು ರಾಜಕೀಯ ಪಕ್ಷದ ಜಿಲ್ಲಾಧ್ಯಕ್ಷರಿಗೆ ವಿತರಿಸಿದರು.

ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1234 ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆ ಕೇಂದ್ರದಲ್ಲಿ ಅಂತಿಮ ಮತದಾರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಚಾರಪಡಿಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾ ವೆಬ್‌ಸೈಟ್ viರಿಚಿಥಿಚಿಟಿಚಿgಚಿಡಿಚಿ.ಟಿiಛಿ.iಟಿ ನಲ್ಲಿ ಹಾಗೂ ಆಯೋಗದ ಪೋರ್ಟ್ಲ್ ಮತ್ತು ವೋಟರ್ ಹೆಲ್ಪ್ಲೈನ್ ಆಪ್‌ನಲ್ಲಿ ಅಪಡೇಟ್ ಮಾಡಲಾಗಿರುತ್ತದೆ.

ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಮಾಹಿತಿಯನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಪರಿಷ್ಕರಣೆ ಪಟ್ಟಿಯ ಅನುಸಾರ ಜಿಲ್ಲೆಯಲ್ಲಿ 374 ಸೇವಾ ಮತದಾರರು, 21,500 ಯುವ ಮತದಾರರು, 16,163 ವಿಕಲಚೇತನ ಮತದಾರರು ನೊಂದಾಣಿ ಮಾಡಿಕೊಂಡಿದ್ದಾರೆ. ಐದು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಒಟ್ಟು ಮತದಾರರಲ್ಲಿ ಪುರುಷ 5,66,240, ಮಹಿಳೆ 5,71,967, ಇತರೆ 139 ಒಟ್ಟು ಮತದಾರರು ಸೇರಿ ಒಟ್ಟು 11,38,346 ಅಂತಿಮ ಪಟ್ಟಿಯಲ್ಲಿದ್ದಾರೆ.

ಅಂತಿಮ ಮತದಾರ ಪಟ್ಟಿ ಪ್ರಕಟಣೆಯ ನಂತರ ಯಾವುದೇ ಮತದಾರರ ನೊಂದಣೆ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಆಯೋಗದ ವೆಬ್‌ಸೈಟ್‌ನಲ್ಲಿ ಹಾಗೂ ವೋಟರ್ ಹೆಲ್ಪ್ಲೈನ್‌ನಲ್ಲಿ ನಿರಂತರ ಮತದಾರ ನೋಂದಾಣಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.