ಜಿಲ್ಲೆ

ಸನ್ ಆಪ್ ಮುತ್ತಣ ಚಿತ್ರದ ಧ್ವನಿ ಸುರುಳಿ ಬಿಡುಗಡೆ

ಮಂಜುನಾಥ

ಹೊಸಪೇಟೆ: ನಗರದ ಮೀರ್ ಆಲಂ ಚಿತ್ರಮಂದಿರದಲ್ಲಿ ಭಾನುವಾರ ಸನ್ ಆಪ್ ಮುತ್ತಣ ಚಿತ್ರತಂಡದಿಂದ ಹಾಡಿನ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.

ನಂತರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಾಯಕ ಪ್ರಣಮ್ ದೇವರಾಜ್ ಮಾತನಾಡಿ, ಸನ್ ಆಪ್ ಮುತ್ತಣಚಿತ್ರ, ತಂದೆ ಮತ್ತು ಮಗನ ಬಾಂಧವ್ಯದ ಚಿತ್ರ. ಶ್ರೀಕಾಂತ್ ಹುಣಸೂರು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ಆಭಿನಯಿಸಿದ್ದಾರೆ. ನಮ್ಮ ಚಿತ್ರದ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಹಾಡುಗಳನ್ನು ಅಪ್ಪು ಸಾರ್ ಗೆ ಅರ್ಪಣೆ ಮಾಡಿದ್ದೇವೆ. ಅಭಿಮಾನಿಗಳು ಕರೆ ಮಾಡಿ ಚಿತ್ರದ ಪ್ರಚಾರಕ್ಕೆ ಬನ್ನಿ ಎಂದು ಕರೆದಿದ್ದರಿಂದ ನಾವು ಹೊಸಪೇಟೆಗೆ ಬಂದಿದ್ದೇವೆ. ಹೊಸಪೇಟೆ ಅಪ್ಪು ಸಾರ್ ಅವರ ನೆಚ್ಚಿನ ಊರು. ಹಾಗಾಗಿ ನಮ್ಮ ತಂಡ ಹೊಸಪೇಟೆಗೆ ಬರಬೇಕಾಯಿತು ಎಂದರು.

ಕಮಲ್ ಹಾಸನ್ ದೊಡ್ಡ ನಟ. ಅಂತಹವರ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ನಾವು ಯಾವಾಗಲೂ ಕನ್ನಡ ನಾಡು, ನುಡಿ, ಜಲದ ಪರವಾಗಿ ಇರುತ್ತೇವೆ. ಕನ್ನಡ ಭಾಷೆ, ಜಲದ ಕುರಿತು ಎಲ್ಲೆ ಆನ್ಯಾಯವಾದರೂ ಕಲಾವಿದರು ಧ್ವನಿ ಎತ್ತಬೇಕು. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ ಎಂದರು.

ಚಿತ್ರದ ನಾಯಕಿ ಖುಷಿ ರವಿ ಮಾತನಾಡಿ, ಸನ್ ಆಪ್ ಮುತ್ತಣ್ಣ ಚಿತ್ರಕ್ಕೆ ಡಾ.ರಾಜ್‌ಕುಮಾರ್ ಸ್ಫೂರ್ತಿ. ಹಾಗಾಗಿ ಈ ಹೆಸರು ಇಡಲಾಗಿದೆ. ಉತ್ತರ ಕರ್ನಾಟಕದ ಜನತೆ ಕನ್ನಡ ಚಿತ್ರಗಳಿಗೆ ಉತ್ತಮ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅದರಲ್ಲು ಹೊಸಪೇಟೆ ಜನತೆ ಕಲಾವಿದರನ್ನು ಪ್ರೋತ್ಸಾಹಿಸಲು ಯಾವಾಗಲೂ ಮುಂದೆ ಇರುತ್ತಾರೆ. ಈ ರೀತಿ ಆಭಿಮಾನಿಗಳು ಪ್ರೋತ್ಸಾಹ ನೀಡಿದರೆ, ನಾವು ಇನ್ನು ಉತ್ತಮ ಚಿತ್ರಗಳನ್ನು ನೀಡಲು ಸ್ಫೂರ್ತಿ ಆಗಲಿದೆ ಎಂದರು.

ಚಿತ್ರದ ನಿರ್ಧೇಶಕ ಶ್ರೀಕಾಂತ ಹುಣಸೂರು ಇದ್ದರು.