ಜಿಲ್ಲೆ

ಗ್ರಾಮ ಒನ್ ಪ್ರಾಂಚೈಸಿಗೆ ಅರ್ಜಿ

ಮಂಜುನಾಥ

ಹೊಸಪೇಟೆ: ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಒನ್ ಕೇಂದ್ರಗಳಿಗೆ ಗ್ರಾಮ ಒನ್ ಅಭ್ಯಥಿಗಳನ್ನು ನೇಮಕ ಮಾಡಲು ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 214 ಗ್ರಾಮ ಒನ್ ಕೇಂದ್ರಗಳ ಅವಶ್ಯಕತೆ ಇದ್ದು, ಈಗಾಗಲೇ 202 ಗ್ರಾಮ ಒನ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಇನ್ನುಳಿದ 12 ಗ್ರಾಮ ಒನ್ ಕೇಂದ್ರಗಳನ್ನು ಪ್ರಾರಂಭಿಸಬೇಕಾಗಿದೆ. ತಾಲೂಕಿನ 114 ಡಾಣಾಪುರ, ಮಲಪನಗುಡಿ, ಪಾಪಿನಾಯಕನಹಳ್ಳಿ, ಸೀತರಾಮತಾಂಡ, ಗಾದಿಗನೂರು, ಹಗರಿಬೊಮ್ಮನಹಳ್ಳಿ ತಾಲೂಕಿನ ಬಾಚಿಗೊಂಡೆನಹಳ್ಳಿ, ಬ್ಯಾಸಿಗಿದೇರಿ, ಹಂಪಸಾಗರ, ನೆಲ್ಲುಕುದರಿ-1, ಹಡಗಲಿ ತಾಲೂಕಿನ ಹಿರೇಹಡಗಲಿ, ಕೂಡ್ಲಿಗಿ ತಾಲೂಕಿನ ಮೊರಬ, ಕಕ್ಕುಪ್ಪಿ ಗ್ರಾಪಂ ವ್ಯಾಪ್ತಿಗಳಲ್ಲಿ ಪ್ರಾಂಚೈಸಿಗಳನ್ನು ನೇಮಕ ಮಾಡಲು ಬೆಂಗಳೂರಿನ ಮೆ.ಬಿಎಲ್.ಎಸ್ ಇಂಟರ್‌ನ್ಯಾಷನಲ್ ಸರ್ವಿಸಸ್ ಇವರು ಜ.1 ರಿಂದ ಜ.15 ರವರೆಗೆ ನಿಯಮಾನುಸಾರ ಅರ್ಜಿ ಆಹ್ವಾನಿಸಿದ್ದು, ಅಭ್ಯರ್ಥಿಗಳು hಣಣಠಿ://ಞಚಿಟ-mಥಿs.gಡಿಚಿmಚಿoಟಿe.ಞಚಿಡಿಟಿಚಿಣಚಿಞಚಿ.gov.iಟಿ/iಟಿಜex.ಠಿhಠಿ/ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.