ಹೊಸಪೇಟೆ: ನಗರದ ವಿಕಾಸ ಸೌಹಾರ್ದ ಕೋ-ಆಪರೇಟಿವ್ ಬ್ಯಾಂಕ್ ಕಳೆದ ಸಾಲಿನ ಆರ್ಥಿಕ ವರ್ಷದಲ್ಲಿ 10.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ.ಹಿರೇಮಠ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಒಟ್ಟು 18 ಶಾಖೆಗಳನ್ನು ಹೊಂದಿದ್ದು, 1656.40 ಕೋಟಿ ರೂ. ವ್ಯವಹಾರ ನಡೆಸಿದ್ದು, 1016 ಕೋಟಿ ರೂ. ಒಟ್ಟು ಠೇವಣಿ ಹೊಂದಿದೆ. 640.40 ಕೋಟಿ ರೂ. ಸಾಲ ನೀಡಿದ್ದು, ಶೇ.1.87ರಷ್ಟು ಅನುತ್ಪಾದಕ ಆಸ್ತಿ ಹೊಂದಿದೆ. ಈ ವರ್ಷದ ಆರ್ಥಿಕ ವರ್ಷಾಂತ್ಯಕ್ಕೆ ಸಾವಿರ ಕೋಟಿ ರೂ. ಠೇವಣಿ ಗಡಿ ದಾಟಿದ್ದು, ಶೆಡ್ಯೂಲ್ ಬ್ಯಾಂಕ್ ದರ್ಜೆ ಸ್ಥಾನಮಾನಕ್ಕಾಗಿ ಬೇಕಾಗುವ ಮಾಪಕದ ಮೊದಲ ಹೆಜ್ಜೆ ಇಟ್ಟಿದೆ ಎಂದರು.
ವಿಕಾಸ ಸೌಹಾರ್ದ ಬ್ಯಾಂಕ್ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಿದೆ. ಎಐ ಆಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳುವುದರತ್ತ ನಾವು ಹೆಜ್ಜೆ ಇರಿಸಿದ್ದೇವೆ. ಇದರಿಂದ ಸಿಬ್ಬಂದಿ ಕಡಿತ ಆಗುವುದಿಲ್ಲ. ಸಿಬ್ಬಂದಿ ಕೌಶಲ್ಯ ವೃದ್ಧಿ ಆಗಲಿದೆ. ರಾಜ್ಯದಲ್ಲಿರುವ ಅಶಕ್ತ ಸಹಕಾರ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ನಡೆಸಲಾಗುವುದು ಎಂದರು.
ಬ್ಯಾAಕಿನ ಬಿ.ಜೆ. ಕುಲಕರ್ಣಿ, ಚಂದಾಹುಸೇನ್, ಛಾಯಾ ದಿವಾಕರ್, ರಮೇಶ್ ಪುರೋಹಿತ್, ಕೆ.ವಿಕಾಸ ಮತ್ತಿತರರಿದ್ದರು.