ಹೊಸಪೇಟೆ: ಗಣೇಶ ಚತುರ್ಥಿಗೆ ಹಬ್ಬಕ್ಕೆ ಇನ್ನೂ ಎರಡು ವಾರ ಬಾಕಿಯಿದ್ದು, ಈಗಲೇ ಗಣಪತಿ ಪ್ರತಿಸ್ಠಾಪನೆಗೆ ಯುವಕರು ರಸ್ತೆಗಳಲ್ಲಿ ಹಗ್ಗ ಅಡ್ಡಗಟ್ಟಿ ಪೈಸಾ ವಸೂಲ್ ಮಾಡುತ್ತಿದ್ದಾರೆ. ಗ್ರಾಮಗಳ ರಸ್ತೆಗಳಲ್ಲಿ ಮಾತ್ರವಲ್ಲ, ರಾಜ್ಯ ಹಾಗೂ ರಾಷ್ಟಿçÃಯ ಹೆದ್ದಾರಿಗಳಲ್ಲೂ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಸ್ವಾತAತ್ರö್ಯ ಪೂರ್ವದಲ್ಲಿ ಸಮಾಜದಲ್ಲಿ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿದ ಗಣೇಶ ಹಬ್ಬವು ಸಧ್ಯ ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬವಾಗಿದೆ. ಈ ಹಬ್ಬವನ್ನು ಮನೆಗಳಲ್ಲಿನ ಸಂಭ್ರಮಕ್ಕಿAತ ಸಾರ್ವಜನಿಕವಾಗಿ ಬೀದಿಗಳಲ್ಲಿ ಪ್ರತಿಷ್ಠಾಪಿಸುವ ಹಬ್ಬದ ಸಡಗರ ಹೆಚ್ಚಾಗಿರುತ್ತದೆ. ಆದರೆ, ಯುವಕರ ತಂಡ ರಸ್ತೆಯಲ್ಲಿ ಪ್ರತಿ ಊರಿನ ಆರಂಭ ಹಾಗೂ ಕೊನೆಯಲ್ಲಿ ಪಟ್ಟಿ ಎತ್ತುವ ಕಾರ್ಯ ಈಗಾಗಲೇ ಆರಂಬಿಸಿದ್ದಾರೆ. ಇದರಿಂದಾಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದ್ದು, ಕೆಲವರು ಕೊಟ್ಟು ಹೋದರೆ, ಇನ್ನೂ ಕೆಲವರು ವಾದಕ್ಕೆ ಇಳಿಯುತ್ತಾರೆ. ಅಂದಾಜು 10 ಕಿ.ಮೀ.ಗೆ ಹತ್ತಾರೂ ಬಾರಿ ಇಲ್ಲಿಸುವ ವಾಹನ ಸವಾರರಿಗೆ ಗಣೇಶ ಪಟ್ಟಿ ವಸೂಲಿ ಮಾಡುವ ಯುವಕರಿಂದ ಬೇಸತ್ತು ಹೋಗಿದ್ದಾರೆ.
ಆಷಾಢ ತಿಂಗಳು ಮುಗಿದ ನಂತರ ಶ್ರಾವಣದಲ್ಲಿ ಒಂದು ತಿಂಗಳ ಕಾಲ ಹಬ್ಬಗಳ ಸಾಲು ಸಾಲು ಆಚರಣೆಗಳು ಬರುತ್ತವೆ. ನಂತರ ಗಣೇಶ ಚತುರ್ಥಿ ನಮ್ಮೆಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಸೆ.07ರಂದು ಗಣೇಶ ಚತುರ್ಥಿ ಇದೆ. ಯುವಕರಿಗೆ ಹಬ್ಬದ ಸಡಗರಕ್ಕೆ ಈಗಾಗಲೇ ಸಿದ್ದತೆ ನಡೆದಿದೆ. ಗಣಪತಿ ಪ್ರತಿಷ್ಠಾಪನ ಬಳಗದ ಯುವಕರು ಬೆಳಗ್ಗಯಿಂದ ಸಂಜೆಯ ವರೆಗೆ ರಸ್ತೆಯಲ್ಲಿ ಹಗ್ಗ ಅಡ್ಡಗಟ್ಟಿ ಪಟ್ಟಿ ಕೇಳುತ್ತಿದ್ದಾರೆ. ಸಂಜೆ ನಂತರ ಮನೆಗಳ ಮುಂದೆ ಪಟ್ಟಿಕೊಡಿ ಎಂದು ಪುಸ್ತಕ ಹಿಡುದು ಮನೆ ಮನೆಗೆ ತಿರುಗಾಡುವುದು ಎನ್ನುವುದು ಸಾಮಾನ್ಯವಾಗಿದೆ. ಇನ್ನೂ ಆ ಪ್ರದೇಶದ ಮುಖಂಡರಿಗೆ ಇನಷ್ಟು ಹೆಚ್ಚಿನ ಜವಾಬ್ದಾರಿ ಹಾಕುತ್ತಾರೆ.
ಗಣೇಶ ಚತುರ್ಥಿಗೆ ಇನ್ನೂ ಒಂದು ತಿಂಗಳು ಬಾಕಿಯಿದೆ. ಈಗಲೇ ಯುವಕರ ತಂಡ ನಗರ ಹಾಗೂ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಪ್ರತಿಯೊಂದು ರಸ್ತೆಯಲ್ಲಿ ಯುವಕರ ತಂಡಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಾರೆ. ಗಣೇಶ ಪಟ್ಟಿ ಕೊಟ್ಟು ಹೋಗಿ ಸ್ವಾಮಿ ಎಂದು ಕೇಳುತ್ತಾರೆ. ಹಣ ಇದ್ದವರು ಒಂದಿಷ್ಟು ಹಣ ಕೊಟ್ಟು ಹೋಗುತ್ತಾರೆ. ಇನ್ನೂ ಕೆಲವರು ಜೇಬು ಖಾಲಿ ಇದದ್ದವರು ಇಲ್ಲ ಎಂದು ಹೇಳೋಕೆ ಮುಜುಗರ ಪಡುತ್ತಾರೆ. ಇನ್ನೂ ಕೆಲವರು ಪಟ್ಟಿ ಕೊಡಲ್ಲ ಎಂದು ವಾಗ್ವಾದನ ನಡೆಸುತ್ತಾರೆ.
ಬೀದಿಗಳಲ್ಲಿ ಗಣಪತಿ ಪ್ರಷ್ಠಾಪನೆಗೆ ಪಟ್ಟಿ ಕೇಳುವುದು ಸಾಮಾನ್ಯವಾಗಿದೆ. ಬಾಲಕರು ಮಾತ್ರವಲ್ಲದೇ ಯುಕವರು ಗುಂಪುಗಳು ಮನೆಗಳ ಮುಂದೆ ಇನ್ನೂ ಕೆಲವರು ರಸ್ತೆಯಲ್ಲಿ ಪಟ್ಟಿ ಕೇಳುವುದು ಸಾಂಪ್ರದಾಯ ಮಾಡಿಕೊಂಡಿದ್ದಾರೆ. ಆದರೆ, ಕೆಲ ಪುಂಡರು ಇದನ್ನೆ ಬಂಡವಾಳ ಮಾಡಿಕೊಂಡು ರಸ್ತೆಗಳಲ್ಲಿ ಗಣೇಶನ ಪಟ್ಟಿ ಸಂಗ್ರಹಿಸಿ ಮೋಜು ಮಸ್ತಿ ಮಾಡುವುದು ಕೂಡ ಸಾಮಾನ್ಯವಾಗಿದೆ. ಇದರಿಂದ ನಿಜವಾಗಿ ಹಬ್ಬ ಆಚರಣೆ ಮಾಡುವ ಯುವಕರ ಗುಂಪುಗಳಿಗೆ ಕಪ್ಪು ಚುಕ್ಕಿಯಾಗಿದೆ.