ಜಿಲ್ಲೆ

ವಾಲ್ಮೀಕಿ ಜಯಂತ್ಯುತ್ಸವ ಇಂದು

ಮಂಜುನಾಥ

ಹೊಸಪೇಟೆ: ತಾಲೂಕು ವಾಲ್ಮೀಕಿ ನಾಯಕ ಸಂಘ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಅ.17ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಸಂಘದ ಅಧ್ಯಕ್ಷ ಗುಜ್ಜಲ ಶ್ರೀನಾಥ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಗರದ ಬಳ್ಳಾರಿ ರಸ್ತೆಯಲ್ಲಿರುವ ಶ್ರೀ ಪುಣ್ಯನಂದಪುರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಜಮೀರ್ ಅಹಮದ್ ಖಾನ್ ಚಾಲನೆ ನೀಡಲಿದ್ದಾರೆ. ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕು ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳನ್ನು ಇತ್ತೀಚಿಗೆ ಆಯ್ಕೆ ಮಾಡಲಾಯಿತು. ಗುಜ್ಜಲ ಶ್ರೀನಾಥ (ಅಧ್ಯಕ್ಷ), ಕಿನ್ನಾಳ್ ಹನುಮಂತ (ಉಪಾಧ್ಯಕ್ಷ), ದೇವರಮನಿ ಶ್ರೀನಿವಾಸ (ಪ್ರಧಾನ ಕಾರ್ಯದರ್ಶಿ), ಗುಡಿ ಸೋಮನಾಥ (ಸಹ ಕಾರ್ಯದರ್ಶಿ), ಬೆಳಗೋಡ್ ಅಂಬಣ್ಣ (ಖಜಾಂಚಿ) ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಗೋಸಲ ರ‍್ಮಪ್ಪ, ಜಂಬಾನಹಳ್ಳಿ ವಸಂತ, ಕಣ್ಣಿ ಶ್ರೀಕಂಠ, ಎಸ್.ಎಸ್.ಚಂದ್ರಶೇಖರ್, ಸಿಂದಿಗೇರಿ ದೇವೇಂದ್ರಪ್ಪ, ತಾರಿಹಳ್ಳಿ ವೆಂಕಟೇಶ್, ಗುಜ್ಜಲ ಚಂದ್ರಶೇಖರ್, ಗುಡಗುಂಟಿ ಮಲ್ಲಿಕಾರ್ಜುನ, ಕಟಗಿ ಜಂಬಯ್ಯ ಹಾಗೂ ನರ‍್ಲೀಗಿ ಕರೆಹನುಮಂತ ನೇಮಕವಾಗಿದ್ದಾರೆ.