ಜಿಲ್ಲೆ

ಹಂಪಿ ಉತ್ಸವ ನಾಡ ಹಬ್ನದಂತೆ ಆಚರಿಸಿ

ಮಂಜುನಾಥ

ಹೊಸಪೇಟೆ: ಹಂಪಿ ಉತ್ಸವ ಅಧಿಕಾರಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು

ಹಂಪಿ ಉತ್ಸವದ ನಿಮಿತ್ತ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ವಸ್ತು ಪ್ರರ‍್ಶನ ಉತ್ತಮ, ಕಳೆದ ಬಾರಿ ಪೊಲೀಸ್ ಇಲಾಖೆ ಸೇರಿ ಇತರೆ ಸಿದ್ದತೆಗಳು ಉತ್ತಮ ಕರ‍್ಯ ನಡೆದಿದೆ. ಹಂಪಿ ಉತ್ಸವ ಎಂದರೆ ನಮ್ಮ ಮನೆ ಹಬ್ಬ ಎಂದು ಅಧಿಕಾರಿಗಳು ನರ‍್ವಹಣೆ ಮಾಡಬೇಕಿದೆ. ಈ ಸಲ ಬೇಸಿಗೆಯಲ್ಲಿ ಉತ್ಸವ ಆಗುತ್ತಿದೆ. ಶಕೆ ಹೆಚ್ಚಿರುವುದರಿಂದ ಕುಡಿವ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಿ. ಕಳೆದ ಬಾರಿಗಿಂತ ಇನ್ನು ಅದ್ದೂರಿಯಾಗಿ ನಡೆಸಬೇಕಿದೆ. ಅಧಿಕಾರಿಗಳಿಗೆ ಬೇಕಿರುವ ವ್ಯವಸ್ಥೆ ರ‍್ಕಾರದಿಂದ ಸೌರ‍್ಯ ಒದಗಿಸಲಾಗುತ್ತದೆ ಎಂದರು.

ಶಾಸಕ ಗವಿಯಪ್ಪ ಮತನಾಡಿ, ಉತ್ಸವದ ನರ‍್ವಹಣೆಯಲ್ಲಿ ಅಧಿಕಾರಿಗಳ ಕರ‍್ಯ ಉತ್ತಮವಾಗಿದೆ. ಉತ್ಸವಕ್ಕೆ ಬರುವ ಜನರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಿ. ಮನೆ ಹಬ್ಬದಂತೆ ಆಚರಣೆ ಆದರೆ ನಾಡ ಹಬ್ಬದಂತೆ ಆಗುತ್ತದೆ. ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಡಿಸಿ ದಿವಾಕರ, ಉತ್ಸವ ಸಿದ್ದತೆ ಭರದಿಂದ ಸಾಗಿದೆ. ಆರು ವೇದಿಕೆಯಲ್ಲಿ ಕರ‍್ಯಕ್ರಮ ನಡೆಯಲಿದೆ. ವಿಶೇಷವಾಗಿ 300 ಬಸ್ ಗಳು ಆಯೋಜನೆ ಮಾಡಲಾಗಿದೆ. ಹೊಸದಾಗಿ ಈ ಬಾರಿ ಬೈಕ್ ರೇಸ್ ನಡೆಸಲು ಚಿಂತನೆ ನಡೆದಿದೆ. ನಿಗದಿ ದಿನದೊಳಗೆ ಪರ‍್ಣಗೊಳ್ಳಲಿದೆ.ಲ ಸಾರಿಗೆ, ಪ್ರರ‍್ಶನ, ಕರ‍್ಯಕ್ರಮ ಆಯೋಜನೆಗಳು ಸುಸೂತ್ರವಾಗಿ ನಡೆಸಲು ಎಲ್ಲ ಸಿದ್ದತೆ‌ನಟೆಸಲಿದೆ. ಆರೋಗ್ಯ ಸೇರಿ ಇತರೆ ಮೂಲಸೌರ‍್ಯ ಒದಗಿಸಲಿದ್ದಾರೆ ಎಂದರು.

ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಉತ್ಸವಾ ಬಿಗಿ ಭದ್ರತೆಗಾಗಿ ಹಂಪಿ-ಹೊಸಪೇಟೆಯಲ್ಲಿ ಒಟ್ಟು 500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹಾಗೂ ಕೊಪ್ಪಳ, ಚಿತ್ರದರ‍್ಗ, ಹಾವೇರಿ, ಬಳ್ಳಾರಿ ರಾಯಚೂರು ಇನ್ನಿತರೆ ಜಿಲ್ಲೆಗಳಿಂದ ಒಬ್ಬ ಎಸ್.ಪಿ, 04 ಹೆಚ್ಚುವರಿ ಎಸ್.ಪಿ, 09 ಡಿ.ಎಸ್.ಪಿ, 36 ಸಿಪಿಐ, 79 ಪಿ.ಎಸ್.ಐ, 183 ಎಎಸ್‌ಐ, 920 ಎಚ್.ಸಿ/ಪಿ.ಸಿ, 500 ಗೃಹರಕ್ಷಕ ದಳದ ಸಿಬ್ಬಂದಿ ಹಾಗೂ 04 ಎಎಸ್‌ಸಿ ತಂಡ, 04 ಕೆ.ಎಸ್.ಆರ್.ಪಿ, 05 ಡಿ.ಎ.ಆರ್ ತುಕಡಿಗಳನ್ನು ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿ.ಪಂ. ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಎಡಿಸಿ ಇ.ಬಾಲಕೃಪ್ಪ, ಎಎಸ್ಪಿ ಸಲೀಂ ಪಾಷಾ, ಹುಡಾ ಅಧ್ಯಕ್ಷ ಎಚ್‌.ಎನ್.ಇಮಾಮ್ ನಿಯಾಜಿ ಇತರರಿದ್ದರು.