ಜಿಲ್ಲೆ

ಯೂರಿಯಾಕ್ಕಾಗಿ ಮುಗಿಬಿದ್ದ ರೈತರು

ಮಂಜುನಾಥ

ಹೊಸಪೇಟೆ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರ ಅಭಾವ ಸೃಷ್ಟಿಯಾಗಿ ರೈತರು ಯೂರಿಯಾ ಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಹೆಚ್ಚಾಗಿ ಗೊಬ್ಬರ ಸಿಗಬುದು ಎಂದು ನೆರೆ ತಾಲೂಕುಗಳಿಂದ ರೈತರು ನಗರದ ಗೊಬ್ಬರದ ಅಂಗಡಿ ಮುಂದೆ ಮುಗಿಬಿದ್ದಿದ್ದರು.

ನಗರದ ಅಂಬೇಡ್ಕರ್ ವೃತ್ತದಲ್ಲಿನ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಬಳಿ ಸೇರಿದಂಥೆ ಇತರೆ ಕಡೆ ಸೋಮವಾರ ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಮರಿಯಮ್ಮನಹಳ್ಳಿ ಭಾಗದ ರೈತರು ಯೂರಿಯಾಕ್ಕಾಗಿ ಮುಗಿಬಿದ್ದಿದ್ದರು. ಪೊಲೀಸ್ ಬಂದೋಬಸ್ತ್ನಲ್ಲಿ ಪ್ರತಿ ಚೀಲಕ್ಕೆ 280 ರೂ.ದಂತೆ ಪ್ರತಿ ರೈತರಿಗೆ ಮೂರು ಚೀಲ ಯೂರಿಯಾ ವಿತರಿಸಲಾಯಿತು. 9 ಸಾವಿರ ಚೀಲ ಬೇಕಿತ್ತು, ಆದರೆ, ಈಗ ಕೇವಲ 450 ಚೀಲ ಬಂದಿವೆ. 150 ಜನ ರೈತರಿಗೆ ತಲಾ 3 ಚೀಲ ಗೊಬ್ಬರ ವಿತರಿಸಲಾಯಿತು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಬಿತ್ತನೆ ಕಾರ್ಯ ಕೂಡ ಹೆಚ್ಚಾಗಿದೆ. 1.95 ಲಕ್ಷ ಹೆಕ್ಟೇರ್ ಗುರಿ ಹೊಂಡಿದ್ದ ಕೃಷಿ ಇಲಾಖೆ, 2.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 26 ಸಾವಿರ ಹೆಕ್ಟೇರ್ ಹೆಚ್ಚಾಗಿದೆ. ಎಪ್ರೀಲ್‌ನಿಂದ ಮೇ ತಿಂಗಳ ವರೆಗೆ 30 ಸಾವಿರ ಮೆಟ್ರಿಕ್ ಟನ್ ಗೊಬ್ಬರ ಬಂದಿದೆ. ಬಿತ್ತನೆ ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ಗೊಬ್ಬರದ ಬೇಡಿಕೆ ಹೆಚ್ಚಿದೆ. ರೈತರು ಒಮ್ಮಲೇ ಯೂರಿಯಾಕ್ಕೆ ಮುಗಿಬೀಳುವುದರಿಂದ ಗೊಬ್ಬರದ ಅಭಾವ ಸೃಷ್ಟಿಯಾದಂತಾಗುತ್ತಿದೆ. ಸದ್ಯ 3 ರಿಂದ 4 ಸಾವಿರ ಮೆಟ್ರಿಕ್ ಟನ್ ಬೇಕಿದೆ. ಮಂಗಳವಾರ ಒಂದು ಸಾವಿರ ಮೆಟ್ರಿಕ್ ಟನ್ ಬರುತ್ತಿದೆ. ಇನ್ನೂ ಬೇಡಿಕೆಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ ಅಧಿಕಾರಿ ಮತ್ತು ವ್ಯಾಪಾರಸ್ಥರು.

ಜಿಲ್ಲೆಯಲ್ಲಿ ಗುರಿಗಿಂತ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಹೆಚ್ಚಾಗಿದೆ. ಮಂಗಳವಾರ ಕೂಡ ಒಂದು ಸಾವಿರ ಮೆಟ್ರಿಕ್ ಟನ್ ಬರುತ್ತಿದೆ. ಹೆಚ್ಚಿನ ಬೇಡಿಕೆಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನ್ಯಾನೋ ಯೂರಿಯಾ ಕೂಡ ಬಳಸ ಬಹುದು. - ಟಿ.ಡಿ.ಮಂಜುನಾಥ, ಕೃಷಿ ಜೆಡಿ, ವಿಜಯನಗರ